ವಿಜಯಪುರದಲ್ಲಿ ಟ್ಯಾಂಕರ್ ಪಲ್ಟಿ: ಕಚ್ಚಾ ಅಡುಗೆ ಎಣ್ಣೆ ಸಂಗ್ರಹಿಸಲು ಸ್ಥಳದಲ್ಲಿ ಮುಗಿಬಿದ್ದ ಜನ
ವಿಜಯಪುರ ಜಿಲ್ಲೆಯ ಹೊರ್ತಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಚ್ಚಾ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಮಹಾರಾಷ್ಟ್ರದಿಂದ ತಮಿಳುನಾಡಿಗೆ ತೆರಳುತ್ತಿದ್ದ ಈ ಟ್ಯಾಂಕರ್‌ನಿಂದ ಚೆಲ್ಲಿದ ಕಚ್ಚಾ ಎಣ್ಣೆಯನ್ನು ಸಂಗ್ರಹಿಸಲು ಸ್ಥಳೀಯರು ಕೊಡ, ಬಿಂದಿಗೆ ಹಿಡಿದು ಮುಗಿಬಿದ್ದಿದ್ದಾರೆ. ಕಚ್ಚಾ ಎಣ್ಣೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಪೊಲೀಸರು ಎಚ್ಚರಿಸಿದರೂ ಜನರು ಇದನ್ನು ಲೆಕ್ಕಿಸದೆ ಎಣ್ಣೆ ಸಂಗ್ರಹಿಸಿದ್ದಾರೆ.
ವಿಜಯಪುರ, ಅಕ್ಟೋಬರ್ 08: ಚಾಲಕನ ನಿಯಂತ್ರಣ ತಪ್ಪಿ ಕಚ್ಚಾ ಅಡುಗೆ ಎಣ್ಣೆ ಸಾಗಾಟ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ತಮಿಳುನಾಡಿಗೆ ಟ್ಯಾಂಕರ್ ತೆರಳುತ್ತಿತ್ತು ಎನ್ನಲಾಗಿದ್ದು, ಸ್ಥಳದಲ್ಲಿ ಜನ ಮುಗಿಬಿದ್ದಿದ್ದು, ಕೊಡ, ವಾಟರ್ ಬಾಟಲ್ಗಳಲ್ಲಿ ಕಚ್ಚಾ ಅಡುಗೆ ಎಣ್ಣಿ ತುಂಬಿಕೊಂಡು ತೆರಳುತ್ತಿದ್ದಾರೆ. ಸಂಸ್ಕರಿಸಿದ ಅಡುಗೆ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕ ಎಂದು ಪೊಲೀಸರು ಎಚ್ಚರಿಸಿದ್ದರೂ, ಜನ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಸ್ಥಳಕ್ಕೆ ಹೊರ್ತಿ ಪಿಎಸ್ಐ ಅನಿತಾ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಜನರನ್ನು ಚದುರಿಸುವ ಕೆಲಸ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
