ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್ ವೇಳೆ ಮಿತಿಮೀರಿತು ಕ್ರೌರ್ಯ
ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತಿದೆ. ಶಿಶಿರ್ ಬಳಿಕ ಅಲ್ಪಾವಧಿಗೆ ಹನುಮಂತ ಕ್ಯಾಪ್ಟನ್ ಆಗಿದ್ದರು. ಈಗ ಹೊಸ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ ನೀಡಲಾಗಿದೆ. ಈ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ ನಡೆದಿದೆ. ಈಗ ಜಗಳ ಮಿತಿಮೀರಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಟಾಸ್ಕ್ ವೇಳೆ ಕ್ರೌರ್ಯ ಮಿತಿ ಮೀರಿತ್ತು. ಸೋಪ್ ನೀರು ಎರಚಿದ್ದರಿಂದ ಸ್ಪರ್ಧಿಗಳು ಆಸ್ಪತ್ರೆ ಸೇರುವಂತೆ ಆಗಿತ್ತು. ಈಗ ಅದು ಮತ್ತೆ ಮರುಕಳಿಸುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವೂ ಇದೆ. ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ನ ಹಾಳು ಮಾಡಬೇಕು ಎಂಬ ಕಾರಣಕ್ಕೆ ಕಿರಿಕ್ ನಡೆದಿದೆ. ಇದು ಮಿತಿಮೀರುವ ಸೂಚನೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.