‘ಗಂಡ-ಹೆಂಡತಿಯಾಗಿ ಡಾಲಿ-ಅಮೃತಾ ಚೆನ್ನಾಗಿ ನಟನೆ ಮಾಡಿದ್ದಾರೆ’: ‘ಹೊಯ್ಸಳ’ ನೋಡಿ ರಮ್ಯಾ ಹೇಳಿದ್ದಿಷ್ಟು

Updated on: Mar 30, 2023 | 4:14 PM

Daali Dhananjay | Amrutha Iyengar: ಡಾಲಿ ಧನಂಜಯ್​ ಮತ್ತು ಅಮೃತಾ ಐಯ್ಯಂಗಾರ್ ಅವರ ಜೋಡಿ ಬಗ್ಗೆ ನಟಿ ರಮ್ಯಾ ಮೆಚ್ಚುಗೆ ಸೂಚಿಸಿದ್ದಾರೆ. ‘ಹೊಯ್ಸಳ’ ಚಿತ್ರ ನೋಡಿ ಅವರು ವಿಮರ್ಶೆ ಹಂಚಿಕೊಂಡಿದ್ದಾರೆ.

ಬಹುನಿರೀಕ್ಷಿತ ‘ಹೊಯ್ಸಳ’ ಸಿನಿಮಾ ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​ ಮತ್ತು ಅಮೃತಾ ಐಯ್ಯಂಗಾರ್​ (Amrutha Iyengar) ಅವರು ಜೋಡಿಯಾಗಿ ನಟಿಸಿದ್ದಾರೆ. ಪೊಲೀಸ್​ ಪಾತ್ರದಲ್ಲಿ ಧನಂಜಯ್​ ಕಾಣಿಸಿಕೊಂಡಿದ್ದರೆ, ಅವರ ಪತ್ನಿ ಪಾತ್ರದಲ್ಲಿ ಅಮೃತಾ ನಟಿಸಿದ್ದಾರೆ. ಇಂದು (ಮಾರ್ಚ್​ 30) ಗಾಂಧಿನಗರದಲ್ಲಿ ರಮ್ಯಾ ದಿವ್ಯ ಸ್ಪಂದನ (Ramya Divya Spandana) ಅವರು ‘ಹೊಯ್ಸಳ’ ಚಿತ್ರ ನೋಡಿ ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್​ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್​ ನೀಡುತ್ತೇನೆ. ಇಬ್ಬರ ಆನ್​ಸ್ಕ್ರೀನ್​ ಮತ್ತು ಆಫ್​ಸ್ಕ್ರೀನ್​ ಕೆಮಿಸ್ಟ್ರಿ ಚೆನ್ನಾಗಿದೆ’ ಎಂದು ರಮ್ಯಾ ಹೇಳಿದ್ದಾರೆ. ಡಾಲಿ ಧನಂಜಯ್​ (Daali Dhananjay) ಜೊತೆ ರಮ್ಯಾ ಅವರು ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲುಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More