ಡಾಲಿ ಹಳೆಯ ಲವ್​ಸ್ಟೋರಿ ಕೇಳಿ ಧನ್ಯತಾ ರಿಯಾಕ್ಷನ್ ಹೇಗಿತ್ತು? ವಿವರಿಸಿದ ಧನಂಜಯ್

Updated on: Feb 05, 2025 | 3:26 PM

ಡಾಲಿ ಧನಂಜಯ್ ಅವರು ಶೀಘ್ರವೇ ಹಸೆಮಣೆ ಏರುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯೆ ಆಗಿರೋ ಧನ್ಯತಾ ಅವರನ್ನು ಧನಂಜಯ್ ವರಿಸುತ್ತಿದ್ದಾರೆ. ಧನಂಜಯ್ ಅವರ ಹೆಸರು ನಟಿಯೊಬ್ಬರ ಜೊತೆ ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಈ ಬಗ್ಗೆ ವಿವರಿಸಿದ್ದು ಹೀಗೆ.

ಧನಂಜಯ್ ಅವರು ಈ ತಿಂಗಳು ಡಾಕ್ಟರ್​ ಧನ್ಯತಾ ಅವರನ್ನು ವರಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಅವರು ಭಾವಿ ಪತ್ನಿ ಜೊತೆ ಸುದ್ದಿಗೋಷ್ಠಿ ನಡೆಸಿದರು. ಆಗ ಹಳೆಯ ಲವ್​ಸ್ಟೋರಿಗಳ ಬಗ್ಗೆ ಪ್ರಶ್ನೆ ಎದುರಾಯಿತು. ‘ನಾನು ಎಲ್ಲವನ್ನು ಹೇಳಿಯೇ ಮದುವೆ ಆಗುತ್ತಿದ್ದೇನೆ. ಎಲ್ಲರಿಗೂ ಲವ್​ಸ್ಟೋರಿ ಇರುತ್ತದೆ. ಸಿನಿಮಾದವರು ಎಂದಾಗ ಅದು ಪ್ರಚಾರ ಆಗಿರುತ್ತದೆ ಅಷ್ಟೇ’ ಎಂದಿದ್ದಾರೆ ಧನಂಜಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More