ಡಾಲಿ ಧನಂಜಯ್ ಮದುವೆಗೆ ಸಿದ್ಧವಾಗ್ತಿದೆ ಬಗೆ ಬಗೆಯ ಖಾದ್ಯ: ಇಲ್ಲಿದೆ ವಿಡಿಯೋ
Daali Dhananjay: ನಟ ಡಾಲಿ ಧನಂಜಯ್, ಧನ್ಯತಾರನ್ನು ವಿವಾಹವಾಗುತ್ತಿದ್ದು, ಇಂದು (ಫೆಬ್ರವರಿ 15) ಮತ್ತು ನಾಳೆ (ಫೆಬ್ರವರಿ 16) ಮದುವೆ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ. ಮದುವೆಗೆ ಆಗಮಿಸುವವರಿಗಾಗಿ ಭಾರಿ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಬಾಣಸಿಗರು ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುತ್ತಿದ್ದು, ಇಲ್ಲಿದೆ ನೋಡಿ ವಿಡಿಯೋ...
ಡಾಲಿ ಧನಂಜಯ್ ಮದುವೆ ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ನಾಳೆ ಮಾಂಗಲ್ಯ ಧಾರಣೆ ಇದ್ದು, ಇಂದು (ಫೆಬ್ರವರಿ 15) ವಿವಿಧ ಶಾಸ್ತ್ರಗಳು ಮತ್ತು ಸಂಜೆ ಆರತಕ್ಷತೆ ಸಮಾರಂಭ ಇದೆ. ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಜೊತೆಗೆ ಡಾಲಿ ಧನಂಜಯ್ ಅಭಿಮಾನಿಗಳು ಸಹ ವಿವಾಹಕ್ಕೆ ಆಗಮಿಸಲಿದ್ದಾರೆ. ಬಂದ ಅತಿಥಿಗಳ ಹೊಟ್ಟೆ ತುಂಬಿಸಲು ಈಗಾಗಲೇ ತಯಾರಿ ಆರಂಭವಾಗಿದೆ. ಹೋಳಿಗೆ, ವಿವಿಧ ಬಗೆಯ ಪಲ್ಯಗಳು, ಪುಲಾವ್ ಇನ್ನೂ ಹಲವು ಬಗೆಯ ಖಾದ್ಯಗಳನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕ ಶೈಲಿಯ ಅಡುಗೆ ತಯಾರಾಗುತ್ತಿದ್ದು, ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ