ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ್ತು
Daali Dhananjay marriage: ಡಾಲಿ ಧನಂಜಯ್ ಹಾಗೂ ಧನ್ಯತಾ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಇಂದು (ಫೆಬ್ರವರಿ 15) ಇಬ್ಬರ ವಿವಾಹ ಆರತಕ್ಷತೆ ನಡೆಯುತ್ತಿದೆ. ಗೆಳೆಯರ ಮದುವೆಗೆ ಹರಿಸಿದ ನಟ ಸತೀಶ್ ನೀನಾಸಂ ಇಬ್ಬರ ಮದುವೆಗೆ ಪರೋಕ್ಷ ಕಾರಣ ನಾನು ಎಂದರು. ಮದುವೆಯಾದವರ ಕ್ಲಬ್ಗೆ ಡಾಲಿಗೆ ಸ್ವಾಗತ ಕೋರಿದರು.
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಆರತಕ್ಷತೆ ಇಂದು (ಫೆಬ್ರವರಿ 15) ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಸಾವಿರಾರು ಜನ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಚಿವರುಗಳು ಎಲ್ಲರ ಜೊತೆಗೆ ಡಾಲಿಯ ಅಭಿಮಾನಿಗಳು ಸಹ ವೇದಿಕೆ ಏರಿ ನೂತನ ವಧು-ವರರಿಗೆ ಶುಭ ಕೋರುತ್ತಿದ್ದಾರೆ. ನಟ ಸತೀಶ್ ನೀನಾಸಂ ಸಹ ಆರತಕ್ಷತೆ ಆಗಮಿಸಿ ಗೆಳೆಯನಿಗೆ ಹರಿಸಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸತೀಶ್ ನೀನಾಸಂ, ಧನ್ಯತಾ ಹಾಗೂ ಡಾಲಿಯ ಮದುವೆಗೆ ಪರೋಕ್ಷ ಕಾರಣ ನಾನು, ಅದೊಂದು ಆಕಸ್ಮಿಕ ಘಟನೆಯಲ್ಲಿ ಅವರಿಬ್ಬರ ಭೇಟಿ ಆಯ್ತು. ನೋಡಿದರೆ ಇಷ್ಟು ಬೇಗ ಇಷ್ಟು ಅದ್ಧೂರಿಯಾಗಿ ಇಬ್ಬರೂ ಮದುವೆ ಆಗುತ್ತಿರುವುದು ಬಹಳ ಖುಷಿ ತಂದಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ