Daily Devotional: ಮನೆಯಲ್ಲಿ ಜರಿ ಕಂಡವರಿಗೆ ಸಿರಿ ಬರುತ್ತೆ
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಜರಿ ಈ ಹುಳ ನಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಇದರ ವಿಶೇಷತೆ ಏನು? ಇದರಿಂದ ಏನು ಶುಭವಾಗುತ್ತದೆ? ಜರಿಯಿಂದ ಶುಭನಾ ಅಥವಾ ಅಶುಭನಾ? ಅದನ್ನು ಸಾಯಿಸಬೇಕಾ ಅಥವಾ ಹಾಗೆ ಬಿಡಬೇಕಾ? ಎಂಬಂತಹ ಅನುಮಾನಗಳಿಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಶತಪದಿ (ಜರಿ) ಅಥವಾ ಲಕ್ಷ್ಮೀ ಚೇಳನ್ನು ಕಾಣುತ್ತೇವೆ. ಈ ಜರಿಗೆ ನೂರು ಕಾಲುಗಳಿರುತ್ತವೆ. ಈ ಹುಳ ನಮ್ಮ ಮನೆಯಲ್ಲಿ ಕಾಣಿಸಿಕೊಂಡರೆ ಇದರ ವಿಶೇಷತೆ ಏನು? ಇದರಿಂದ ಏನು ಶುಭವಾಗುತ್ತದೆ?. ಉದಾಹರಣೆಗೆ ಮನೆಯಲ್ಲಿ ಹಲ್ಲಿ ಲೊಚುಗುಟ್ಟರೆ, ಹಾವು ಕಾಣಿಸಿಕೊಂಡರೆ ಅದರದ್ದೇ ಆದ ಶಕುನಗಳು ನಮ್ಮ ಮನೆಯಲ್ಲಿ ಪ್ರಭಾವ ಬೀರುತ್ತದೆ. ಹಾಗೆ ಜರಿಯಿಂದ ಶುಭನಾ ಅಥವಾ ಅಶುಭನಾ? ಅದನ್ನು ಸಾಯಿಸಬೇಕಾ ಅಥವಾ ಹಾಗೆ ಬಿಡಬೇಕಾ? ಎಂಬಂತಹ ಅನುಮಾನಗಳಿರುತ್ತವೆ. ಇದರ ಜೊತೆಗೆ ಏನೋ ಅನಾಹುತ ಆಗುತ್ತದೆ ಎಂಬ ಅನುಮಾನ ಕೂಡ ಇರುತ್ತದೆ. ಜರಿಯನ್ನು ಲಕ್ಷ್ಮೀ ಚೇಳು ಅಂತಲೂ ಕರೆಯುತ್ತಾರೆ. ಆಡು ಭಾಷೆಯಲ್ಲಿ ಹೇಳುತ್ತಾರೆ ಜರಿ ಕಂಡವನಿಗೆ ಸಿರಿ ಬರುತ್ತೆ ಅಂತ.