Daily Devotional: ‘ಧರ್ಮೋ ರಕ್ಷತೀ ರಕ್ಷಿತಃ’ ಇದರ ನಿಜವಾದ ಅರ್ಥವೇನು ಗೊತ್ತಾ?

Updated on: Sep 17, 2025 | 6:45 AM

ಧರ್ಮೋ ರಕ್ಷತಿ ರಕ್ಷಿತಃ ಎಂಬ ನುಡಿಗಟ್ಟಿನ ನಿಜವಾದ ಅರ್ಥವನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಮನುಸ್ಮೃತಿ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಈ ನುಡಿಗಟ್ಟು ಕೇವಲ ಜಾತಿ ಅಥವಾ ಮತಕ್ಕೆ ಸೀಮಿತವಾಗಿಲ್ಲ. ಒಳ್ಳೆಯ ನಡತೆ, ಸದಾಚಾರ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವುದು ಧರ್ಮದ ಭಾಗವಾಗಿದೆ. ವಿಡಿಯೋ ನೋಡಿ.

ಬೆಂಗಳೂರು, ಸೆಪ್ಟೆಂಬರ್​ 17: ಧರ್ಮೋ ರಕ್ಷತಿ ರಕ್ಷಿತಃ ಎಂಬ ಪ್ರಸಿದ್ಧವಾದ ನುಡಿಗಟ್ಟು ಜೀವನದಲ್ಲಿ ಧರ್ಮದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದು ಕೇವಲ ಒಂದು ನಾಣ್ಣುಡಿ ಅಲ್ಲ, ಬದಲಾಗಿ ಮನುಸ್ಮೃತಿ ಮತ್ತು ಮಹಾಭಾರತದಂತಹ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂದು ಆಳವಾದ ತತ್ವವಾಗಿದೆ. ಈ ನುಡಿಗಟ್ಟಿನ ಅರ್ಥ ಕೇವಲ ಒಂದು ನಿರ್ದಿಷ್ಟ ಜಾತಿ ಅಥವಾ ಮತಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಇದು ಒಳ್ಳೆಯ ನಡತೆ, ಸದಾಚಾರ ಮತ್ತು ಸಮಾಜಕ್ಕೆ ಸೇವೆಯನ್ನ ಒಳಗೊಂಡಿದೆ.