Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
"ಪರೋಪಕಾರಾರ್ಥಂ ಇದಂ ಶರೀರಂ" ಎಂದು ಸಂಸ್ಕೃತದ ಸಾಲು ಇದೆ. ಈ ಸಂಸ್ಕೃತದ ಸಾಲಿನ ಅರ್ಥವೇನು? ಪರೋಪಕಾರ ಏನಕೆ ಮಾಡಬೇಕು? ಪರೋಪಕಾರ ಎಂದರೇನು? ಪರೋಪಕಾರದಿಂದ ನಮಗೆ ಆಗುವ ಲಾಭವೇನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.
“ಪರೋಪಕಾರಾರ್ಥಂ ಇದಂ ಶರೀರಂ” ನಾವು ನಮ್ಮವರ, ನಮ್ಮ ಸಮಾಜದ ಉಪಯೋಗಕ್ಕಾಗಿ ಜೀವಿಸಬೇಕು. ಈ ಶರೀರ ಇರುವುದೇ ಮತ್ತೊಬ್ಬರ ಸೇವೆಗೆ. ಪ್ರತಿಯೊಬ್ಬ ವ್ಯಕ್ತಿಯೂ ಸೇವಾ ಮನೋಭಾವನೆಯನ್ನು ಹೊಂದಬೇಕು. ಸೇವಾಹಿ ಪರಮೋ ಧರ್ಮಃ’ ಎಂದು ಹೇಳುವ ಮಾತು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ. ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ. ಸೇವೆ ಸ್ವಾರ್ಥರಹಿತವಾಗಿದ್ದಾಗ ಹೆಚ್ಚಿನ ಮೌಲ್ಯ ಪಡೆಯುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ