Daily Devotional: ಯಾವ ಬೆರಳಿನಿಂದ ಯಾವ ವಿಧವಾಗಿ ಕುಂಕುಮ ಇಡಬೇಕು?

Updated on: Feb 04, 2026 | 7:10 AM

ನಮ್ಮ ದೈನಂದಿನ ಪೂಜೆಗಳಲ್ಲಿ ಮತ್ತು ಸಮಾಜದಲ್ಲಿ ಕುಂಕುಮ ಹಾಗೂ ವಿಭೂತಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಧಾರ್ಮಿಕ ಸಂಪ್ರದಾಯವಲ್ಲ, ಬದಲಿಗೆ ನಮ್ಮ ಬಾಂಧವ್ಯಗಳನ್ನು ಬಲಪಡಿಸುವ ಮತ್ತು ಶುಭಫಲಗಳನ್ನು ತರುವ ಒಂದು ಮಾರ್ಗವಾಗಿದೆ. ನಾವು ಕುಂಕುಮವನ್ನು ಹಚ್ಚುವಾಗ ಯಾವ ಬೆರಳನ್ನು ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ನಮ್ಮ ಬಲಗೈಯ ಐದು ಬೆರಳುಗಳು ಐದು ವಿಭಿನ್ನ ಗ್ರಹಗಳನ್ನು ಪ್ರತಿನಿಧಿಸುತ್ತವೆ. ಶುಕ್ರ, ಗುರು, ಶನಿ, ರವಿ ಮತ್ತು ಬುಧ ಗ್ರಹಗಳ ಪ್ರತೀಕವಾಗಿರುವ ಈ ಬೆರಳುಗಳ ಸರಿಯಾದ ಬಳಕೆಯಿಂದ ನಾವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಫೆಬ್ರುವರಿ​ 04: ನಮ್ಮ ದೈನಂದಿನ ಪೂಜೆಗಳಲ್ಲಿ ಮತ್ತು ಸಮಾಜದಲ್ಲಿ ಕುಂಕುಮ ಹಾಗೂ ವಿಭೂತಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಧಾರ್ಮಿಕ ಸಂಪ್ರದಾಯವಲ್ಲ, ಬದಲಿಗೆ ನಮ್ಮ ಬಾಂಧವ್ಯಗಳನ್ನು ಬಲಪಡಿಸುವ ಮತ್ತು ಶುಭಫಲಗಳನ್ನು ತರುವ ಒಂದು ಮಾರ್ಗವಾಗಿದೆ. ನಾವು ಕುಂಕುಮವನ್ನು ಹಚ್ಚುವಾಗ ಯಾವ ಬೆರಳನ್ನು ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ನಮ್ಮ ಬಲಗೈಯ ಐದು ಬೆರಳುಗಳು ಐದು ವಿಭಿನ್ನ ಗ್ರಹಗಳನ್ನು ಪ್ರತಿನಿಧಿಸುತ್ತವೆ. ಶುಕ್ರ, ಗುರು, ಶನಿ, ರವಿ ಮತ್ತು ಬುಧ ಗ್ರಹಗಳ ಪ್ರತೀಕವಾಗಿರುವ ಈ ಬೆರಳುಗಳ ಸರಿಯಾದ ಬಳಕೆಯಿಂದ ನಾವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

ಸ್ವತಃ ಕುಂಕುಮ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುವಾಗ ಮಧ್ಯದ ಬೆರಳು (ಶನಿಯ ಬೆರಳು) ಬಳಸುವುದರಿಂದ ಶನಿಯ ಕಾಟ ಕಡಿಮೆಯಾಗಿ, ಆಯುಷ್ಯ ವೃದ್ಧಿಯಾಗುತ್ತದೆ ಹಾಗೂ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮುತ್ತೈದೆಯರಿಗೆ, ಹಿರಿಯರಿಗೆ, ಅತಿಥಿಗಳಿಗೆ ಅಥವಾ ಮಕ್ಕಳಿಗೆ ಕುಂಕುಮ ಹಚ್ಚುವಾಗ ಹೆಬ್ಬೆರಳನ್ನು ಬಳಸಬೇಕು. ಇದು ಬಾಂಧವ್ಯಗಳನ್ನು ವೃದ್ಧಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.