Daily Devotional: ದೇವರಿಗೆ ಆರತಿ ಮಾಡುವಾಗ ಕೈ ಜಾರಿದರೆ ಏನು ಸೂಚನೆ?

Updated on: May 18, 2025 | 7:22 AM

ಪೂಜೆಯ ಸಮಯದಲ್ಲಿ ಆರತಿ ತಟ್ಟೆ ಬೀಳುವುದು ಅಪಶಕುನವೇ ಎಂಬ ಪ್ರಶ್ನೆಗೆ ಗುರೂಜಿಯವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಆರತಿ ತಟ್ಟೆ ಬಿದ್ದರೆ, ಅದು ಪೂಜೆಯಲ್ಲಿನ ಏಕಾಗ್ರತೆ ಮತ್ತು ಶ್ರದ್ಧಾಭಕ್ತಿಯ ಕೊರತೆಯನ್ನು ಸೂಚಿಸುತ್ತದೆ. ಈ ವೇಳೆ ಮನೆದೇವರು ಮತ್ತು ಕುಲದೇವರಿಗೆ ಪ್ರಾರ್ಥನೆ ಮಾಡಿ, ತುಪ್ಪದ ದೀಪವನ್ನು ಬೆಳಗಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಬೆಂಗಳೂರು, ಮೇ 18: ಪೂಜೆಯ ಸಮಯದಲ್ಲಿ ಆರತಿ ತಟ್ಟೆ ಅಥವಾ ಆರತಿಯ ಉಪಕರಣಗಳು ಬಿದ್ದರೆ ಅದು ಅಪಶಕುನವೇ ಎಂಬ ಪ್ರಶ್ನೆ ಅನೇಕರಲ್ಲಿ ಉದ್ಭವಿಸುತ್ತದೆ. ಡಾ. ಬಸವರಾಜ್ ಗುರುಜಿ ಅವರು ಈ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಪೂಜೆಯ ಸಮಯದಲ್ಲಿ ಏಕಾಗ್ರತೆ, ಶ್ರದ್ಧೆ ಮತ್ತು ಭಕ್ತಿ ಅತ್ಯಗತ್ಯ. ನಾವು ಆರತಿ ಮಾಡುವಾಗ ಅಲಕ್ಷ್ಯದಿಂದ ಇತರ ಕೆಲಸಗಳಲ್ಲಿ ತೊಡಗಿಕೊಂಡರೆ ಅದು ಪೂಜೆಯ ಫಲವನ್ನು ಕಡಿಮೆ ಮಾಡುತ್ತದೆ. ಆರತಿ ತಟ್ಟೆ ಬಿದ್ದರೆ ಅದು ಮುಂದಿನ ದಿನಗಳಲ್ಲಿ ಆಗಬಹುದಾದ ಅಡ್ಡಿ-ಆತಂಕಗಳನ್ನು ಸೂಚಿಸಬಹುದು.

Published on: May 18, 2025 07:15 AM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More