Daily Devotional: ಅಂಗಡಿ ಬಾಗಿಲು ಯಾವ ದಿಕ್ಕಿಗೆ ಇದ್ದರೆ ಒಳ್ಳೆಯದು? ವಿಡಿಯೋ ನೋಡಿ

|

Updated on: Apr 29, 2024 | 7:32 AM

ವಾಸ್ತುವು ಅಂಗಡಿಯ ವಿನ್ಯಾಸ, ಪ್ರವೇಶ, ಹೊರಾಂಗಣ ವ್ಯವಸ್ಥೆಗಾಗಿ ನಿರ್ದಿಷ್ಟ ಸಲಹೆಗಳನ್ನು ನೀಡುತ್ತದೆ. ಇದರಿಂದಾಗಿ ಹೆಚ್ಚಿಗೆ ವ್ಯಾಪಾರವಾಗುತ್ತದೆ ಅಂತ ನಂಬಿಕೆ. ಮತ್ತು ಮಾಲೀಕರ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಿದ್ದರೆ ಅಂಗಡಿಗಳು ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮುಖ ಮಾಡಿದ್ದರೆ ಯಾವ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು ಎಂಬುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಪ್ರಮುಖ ದಿಕ್ಕುಗಳು ನಾಲ್ಕು. ಅವೆಂದರೆ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ. ಕೆಲವೊಮ್ಮೆ ಉಪ ದಿಕ್ಕುಗಳಿಗೆ ಅಂಗಡಿಗಳು ಮುಖಮಾಡಿ ನಿರ್ಮಿಸಲ್ಪಟ್ಟಿರುವುದೂ ಉಂಟು. ಉಪದಿಕ್ಕುಗಳೆಂದರೆ ಈಶಾನ್ಯ, ಆಗ್ನೇಯ, ನೈಋತ್ಯ ಮತ್ತು ವಾಯುವ್ಯ. ವಾಸ್ತು ಶಾಸ್ತ್ರದ ತತ್ವಗಳ ಮೇಲೆ ವಿನ್ಯಾಸಗೊಳಿಸಲಾದ ಅಂಗಡಿಯು ಚಿಲ್ಲರೆ ವ್ಯಾಪಾರಗಳಿಗೆ ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತುವು ಅಂಗಡಿಯ ವಿನ್ಯಾಸ, ಪ್ರವೇಶ, ಹೊರಾಂಗಣ ವ್ಯವಸ್ಥೆಗಾಗಿ ನಿರ್ದಿಷ್ಟ ಸಲಹೆಗಳನ್ನು ನೀಡುತ್ತದೆ. ಇದರಿಂದಾಗಿ ಹೆಚ್ಚಿಗೆ ವ್ಯಾಪಾರವಾಗುತ್ತದೆ ಅಂತ ನಂಬಿಕೆ. ಮತ್ತು ಮಾಲೀಕರ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಿದ್ದರೆ ಅಂಗಡಿಗಳು ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮುಖ ಮಾಡಿದ್ದರೆ ಯಾವ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು ಎಂಬುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.