ಮೋದಿ ಕೂತಿದ್ದ ಕುರ್ಚಿಗೆ ಕೈ ಮುಗಿದು ಕೊಂಡೊಯ್ದ ಕಾರ್ಯಕರ್ತರು; ವಿಡಿಯೋ ವೈರಲ್​

ಮೋದಿ ಕೂತಿದ್ದ ಕುರ್ಚಿಗೆ ಕೈ ಮುಗಿದು ಕೊಂಡೊಯ್ದ ಕಾರ್ಯಕರ್ತರು; ವಿಡಿಯೋ ವೈರಲ್​

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 28, 2024 | 9:36 PM

ಲೋಕಸಭಾ ಚುನಾವಣೆ ಹಿನ್ನಲೆ ನಿನ್ನೆಯೇ(ಏ.27) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬೆಳಗಾವಿಗೆ ಆಗಮಿಸಿದ್ದರು. ಇಂದು ರಾಜ್ಯದ ನಾಲ್ಕು ಕಡೆಗಳಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದರಂತೆ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ವೇಳೆ ಮೋದಿ ಕುಳಿತಿದ್ದ ಕುರ್ಚಿಗೆ ನಮಸ್ಕರಿಸಿದ ಕಾರ್ಯಕರ್ತರು, ಕೈ ಮುಗಿದು ಕೊಂಡೊಯ್ದಿದ್ದಾರೆ.

ವಿಜಯನಗರ, ಏ.28: ಲೋಕಸಭಾ ಚುನಾವಣೆ ಹಿನ್ನಲೆ ನಿನ್ನೆಯೇ(ಏ.27) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬೆಳಗಾವಿಗೆ ಆಗಮಿಸಿದ್ದರು. ಇಂದು ರಾಜ್ಯದ ನಾಲ್ಕು ಕಡೆಗಳಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದರಂತೆ ಜಿಲ್ಲೆಯ ಹೊಸಪೇಟೆಯಲ್ಲಿ(Hosapete) ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ‘ದೇಶ ಬಹಳ ವೇಗವಾಗಿ ಮುಂದೆ ಸಾಗುತ್ತಿದೆ. ಕೆಲವು ದೇಶ ಹಾಗೂ ಸಂಸ್ಥೆಗಳಿಗೆ ಇದು ಇಷ್ಟ ಇಲ್ಲ, ಕೆಲವರು ಭಾರತ ಸರ್ಕಾರ ದುರ್ಬಲ ಆಗಬೇಕೆಂದು ಬಯಸುತ್ತಿದ್ದಾರೆ. ಸ್ವಂತ ಲಾಭ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್​​ ಪಕ್ಷಕ್ಕೂ ಕೂಡ ಇದೇ ಬೇಕಿದೆ. ಆದರೆ, ಇದಕ್ಕೆಲ್ಲಾ ಸುಭದ್ರ ಬಿಜೆಪಿ ಸರ್ಕಾರ ತಡೆಯೊಡ್ಡಿದೆ ಎಂದರು. ಇನ್ನು ಕಾರ್ಯಕ್ರಮದ ಬಳಿಕ ಮೋದಿ ಕುಳಿತಿದ್ದ ಕುರ್ಚಿಗೆ ನಮಸ್ಕರಿಸಿದ ಕಾರ್ಯಕರ್ತರು, ಕೈ ಮುಗಿದು ಕೊಂಡೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Apr 28, 2024 09:33 PM