ಇಲಾನ್ ಮಸ್ಕ್ ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಆಗುವ ಅನುಕೂಲಗಳೇನು, ಇಲ್ಲಿದೆ ಡೀಟೇಲ್ಸ್

Elon Musk India Visit on April 21, 22: ಇಲಾನ್ ಮಸ್ಕ್ ಅವರ ಮೊದಲ ಭಾರತ ಭೇಟಿಯು ಹಲವು ವಿಷಯಗಳಲ್ಲಿ ಮಹತ್ವದ್ದಾಗಿದೆ. ಈ ಭೇಟಿಯ ಸಮಯದಲ್ಲಿ, ಅವರು ಟೆಸ್ಲಾ ಮತ್ತು ಇತರ ವ್ಯವಹಾರಗಳ ಮೂಲಕ ಭಾರತದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ಘೋಷಿಸಬಹುದು. ಮರುನವೀಕರಣ ಇಂಧನ ಯೋಜನೆ, ಟೆಸ್ಲಾ ಫ್ಯಾಕ್ಟರಿ, ಆರ್ ಅಂಡ್ ಡಿ ಸೆಂಟರ್, ಇವಿ ಇಕೋಸಿಸ್ಟಂ ಇತ್ಯಾದಿ ವಿವಿಧ ಅನುಕೂಲಗಳು ಭಾರತಕ್ಕೆ ಒದಗಿ ಬರಬಹುದು. ಟೆಸ್ಲಾಗೂ ಭಾರತದ ಹೊಸ ಮಾರುಕಟ್ಟೆ ಸಿಕ್ಕಂತಾಗಲಿದೆ.

ಇಲಾನ್ ಮಸ್ಕ್ ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಆಗುವ ಅನುಕೂಲಗಳೇನು, ಇಲ್ಲಿದೆ ಡೀಟೇಲ್ಸ್
ಇಲಾನ್ ಮಸ್ಕ್
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 17, 2024 | 6:09 PM

ವಿಶ್ವದ ಅತ್ಯಂತ ಶ್ರೀಮಂತರಲ್ಲೊಬ್ಬರಾಗಿರುವ ಇಲಾನ್ ಮಸ್ಕ್ (elon musk) ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಅವರ ಮೊದಲ ಭಾರತ ಭೇಟಿಯೂ ಆಗಿದೆ. ಮೊದಲ ಹಂತದ ಚುನಾವಣೆ ಮುಗಿದ ಮಾರನೆಯ ದಿನ ಮಸ್ಕ್ ಭಾರತಕ್ಕೆ ಬರಲಿದ್ದಾರೆ. ಏಪ್ರಿಲ್ 21 ಮತ್ತು 22ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಸೇರಿದಂತೆ ಮಸ್ಕ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಭಾನುವಾರ ಮತ್ತು ಸೋಮವಾರ ಆಗಲಿರುವ ಅವರ ಭೇಟಿ ಬಹಳ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಈ ಭೇಟಿಯ ಸಮಯದಲ್ಲಿ, ಅವರು ಟೆಸ್ಲಾ ಮತ್ತು ಇತರ ವ್ಯವಹಾರಗಳ ಮೂಲಕ ಭಾರತದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಯನ್ನು ಘೋಷಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರು ಟೆಸ್ಲಾವನ್ನು ಹೊರತುಪಡಿಸಿ ಭಾರತಕ್ಕೆ ಇನ್ನೇನು ತರುತ್ತಿದ್ದಾರೆ, ಮತ್ತು ಅವರು ಭಾರತಕ್ಕೆ ಬರುವುದರಿಂದ ಆಗಬಹುದಾದ ಬದಲಾವಣೆಗಳು, ಘೋಷಣೆಗಳೇನು ಎಂಬುದರ ವಿವರ ಇಲ್ಲಿದೆ.

ಭಾರತಕ್ಕೆ ಇಲಾನ್ ಮಸ್ಕ್ ಏನು ತರುತ್ತಿದ್ದಾರೆ?

ಇಲಾನ್ ಮಸ್ಕ್ ಅವರು ಟೆಸ್ಲಾವನ್ನು ಮಾತ್ರವಲ್ಲದೆ ಇಡೀ ಇವಿ ಪರಿಸರ ವ್ಯವಸ್ಥೆಯನ್ನು ಭಾರತಕ್ಕೆ ತರುತ್ತಿದ್ದಾರೆ. ಇಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸುವುದು ಮಾತ್ರವಲ್ಲ, ವಾಹನ ತಯಾರಿಕೆಗೆ ಬೇಕಾದ ಪೂರ್ಣ ಇಕೋ ಸಿಸ್ಟಂ ಅನ್ನು ಭಾರತದಲ್ಲಿ ನೆಲೆಗೊಳಿಸಲಿದ್ದಾರೆ. ಅಂದರೆ, ಇಲಾನ್ ಮಸ್ಕ್‌ನ EV ಕಂಪನಿಯು ಭಾರತದಲ್ಲಿ ತನ್ನ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ತಯಾರಿಸುವುದಲ್ಲದೆ, ಬಿಡಿಭಾಗಗಳ ಪೂರೈಕೆಗೆ ಸ್ಥಳೀಯ ಉದ್ದಿಮೆಗಳಿಗೆ ಅವಕಾಶ ಕೊಡಲಿದೆ. ಇದಲ್ಲದೆ, ಅವರ ಇಂಟರ್ನೆಟ್ ಸ್ಟರ್ಲಿಂಗ್ ಭಾರತಕ್ಕೂ ಬರಬಹುದು. ಅದೇ ಸಮಯದಲ್ಲಿ, ಸ್ಪೇಸ್ ಎಕ್ಸ್ ಕೂಡ ಭಾರತದ ಜೊತೆ ನಂಟು ಸಾಧಿಸಬಹುದು.

ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಟೆಸ್ಲಾ ಮತ್ತು ಸ್ಯಾಟಲೈಟ್ ಇಂಟರ್ನೆಟ್ ಕಂಪನಿಯಾದ ಸ್ಟಾರ್​ಲಿಂಕ್ ಅನ್ನು ಭಾರತದಲ್ಲಿ ಪ್ರಾರಂಭಿಸಲು ಯೋಜಿಸಿದ್ದಾರೆ. ಭಾರತದಲ್ಲಿ 2 ರಿಂದ 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಈ ಸಂದರ್ಭದಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್​ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್

ಭಾರತಕ್ಕೆ ಆಗಬಹುದಾದ ಬದಲಾವಣೆಗಳೇನು?

ಟಾಟಾ, ಎಂಜಿ ಮೋಟಾರ್ಸ್, ಮಹೀಂದ್ರಾ ಭಾರತದ ಇವಿ ಮಾರುಕಟ್ಟೆಯನ್ನು ಆಕ್ರಮಿಸಿರುವ ಪ್ರಮುಖ ಕಂಪನಿಗಳು. ಒಟ್ಟಾರೆ ವಾಹನ ಮಾರಾಟದಲ್ಲಿ ಇವಿ ಪಾಲು ಕೇವಲ ಶೇ. 2 ಮಾತ್ರವೇ. ಆದರೆ, ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಭಾರತದಲ್ಲಿ ಗಣನೀಯವಾಗಿ ವಿಸ್ತರಿಸಲಿದೆ. ಈ ಹಂತದಲ್ಲಿ ಟೆಸ್ಲಾದ ಫ್ಯಾಕ್ಟರಿ ಬಂದರೆ ಈ ಉದ್ಯಮಕ್ಕೆ ಇನ್ನಷ್ಟು ಗರಿಗೆದರಿದಂತಾಗುತ್ತದೆ. ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮವೂ ಇನ್ನಷ್ಟು ಬಲಗೊಂಡಂತಾಗುತ್ತದೆ.

ಟೆಸ್ಲಾ ತನ್ನ ವಾಹನಗಳಿಗೆ ಅಳವಡಿಸುವ ಸೆಮಿಕಂಡಕ್ಟರ್ ಚಿಪ್ ಅನ್ನು ಪಡೆಯಲು ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತನಗೆ ಬೇಕಾದ ಸರಬರಾಜು ಸರಪಳಿಯಲ್ಲಿ ಭಾರತವನ್ನೂ ಒಳಗೊಳ್ಳಲು ಮಸ್ಕ್ ಆಸಕ್ತರಾಗದ್ದಾರೆ.

ಟೆಸ್ಲಾ ಭಾರತದಲ್ಲಿ ಮಾಡೆಲ್-2 ಕಾರುಗಳನ್ನು ತಯಾರಿಸಲಿದೆ. ಇದರ ಬೆಲೆ ಸುಮಾರು 25 ಲಕ್ಷ ರೂಪಾಯಿ ಆಗಬಹುದು. ಈಗಾಗಲೇ ಭಾರತದಲ್ಲಿ ಇ-ಕಾರುಗಳನ್ನು ತಯಾರಿಸುತ್ತಿರುವ ಕಂಪನಿಗಳಿಗೆ ಪೈಪೋಟಿ ಹೆಚ್ಚಲಿದೆ. ಜನರು ಹೆಚ್ಚಿನ ಆಯ್ಕೆಗಳನ್ನು ಪಡೆಯುತ್ತಾರೆ.

ಇಲಾನ್ ಮಸ್ಕ್​ಗೆ ಭಾರತದಿಂದ ಏನು ಪ್ರಯೋಜನ?

ಟೆಸ್ಲಾ ಕಾರುಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ವಾರ್ಷಿಕ ಆದಾಯವೂ ಕುಸಿದಿದೆ. ಇದಕ್ಕೆ ಕಾರಣ ಚೀನಾ ಮತ್ತು ಯುರೋಪಿಯನ್ ಕಂಪನಿಗಳಿಂದ ಕಠಿಣ ಪೈಪೋಟಿ ಎದುರಿಸುತ್ತಿರುವುದು. ಟೆಸ್ಲಾ ಭಾರತಕ್ಕೆ ಬಂದರೆ, ಅದು ಹೊಸ ಗ್ರಾಹಕರ ನೆಲೆಯನ್ನು ಪಡೆಯುತ್ತದೆ. ಭಾರತದ ಇವಿ ಮಾರುಕಟ್ಟೆ ಗಣನೀಯವಾಗಿ ಹೆಚ್ಚಲಿದೆ. ಇದರ ಪ್ರಯೋಜನವನ್ನು ಟೆಸ್ಲಾ ಪಡೆಯಬಹುದು.

ಇದನ್ನೂ ಓದಿ: ಅದೇ ಸಂಬಳ, ಹೆಚ್ಚು ಕೆಲಸ; ಉದ್ಯೋಗಿಗಳನ್ನು ಕಾಡುತ್ತಿದೆ ‘ಒಣ ಬಡ್ತಿ’ ಟ್ರೆಂಡ್

ಸ್ಟಾರ್‌ಲಿಂಕ್​ಗೆ ದಾರಿ

ಸ್ಟಾರ್‌ಲಿಂಕ್ ಭಾರತೀಯ SATCom ಮಾರುಕಟ್ಟೆಯನ್ನು ಪ್ರವೇಶಿಸುವ ಕನಸನ್ನು 2022ರಿಂದಲೇ ಕಾಣುತ್ತಿದೆ. ಆದರೆ ಇದಕ್ಕೆ ಕಾನೂನು ಅಡ್ಡಿ ಇದೆ. ಭಾರತ ಸರ್ಕಾರ 2023 ರಲ್ಲಿ ಟೆಲಿಕಾಂ ಕಾಯ್ದೆ ಮೂಲಕ ಕೆಲವು ಅಡೆತಡೆಗಳನ್ನು ತೆಗೆದುಹಾಕಿದೆ. ಇದೀಗ ಸ್ಟಾರ್‌ಲಿಂಕ್‌ಗೆ ಲೈಸೆನ್ಸ್ ನೀಡಲು ದಾರಿ ಸುಗಮವಾಗಿದೆ. ಗೃಹ ಸಚಿವಾಲಯದ ಒಪ್ಪಿಗೆ ಮಾತ್ರ ಬಾಕಿ ಇದೆ. ಭಾರತದಲ್ಲಿ ಸ್ಟಾರ್‌ಲಿಂಕ್‌ನ ಪ್ರವೇಶ ಬಹುತೇಕ ಖಚಿತವಾಗಿದೆ. ಇದರೊಂದಿಗೆ ಜನರಿಗೆ ಉಪಗ್ರಹ ಆಧಾರಿತ ಇಂಟರ್ನೆಟ್ ಸಿಗಲಿದೆ. ಮಸ್ಕ್ ಭಾರತದಲ್ಲಿ ತನ್ನದೇ ಆದ ಸೆಟಿಲೈಟ್ ಅಧಾರಿತ ಇಂಟರ್ನೆಟ್ ಸೇವೆ ಸಹ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.

ಸ್ಪೇಸ್ ಎಕ್ಸ್ ಪ್ರವೇಶ

ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ (SpaceX) ಬಹಳ ಕಡಿಮೆ ಬೆಲೆಗೆ ಉಪಗ್ರಹಗಳ ಉಡಾವಣೆ ಸೇವೆ ಮಾಡುತ್ತದೆ. ಭಾರತದಲ್ಲಿ 2023ರಲ್ಲಿ ಬಾಹ್ಯಾಕಾಶ ನೀತಿ ಚಾಲನೆಗೆ ಬಂದಿದೆ. ಸರ್ಕಾರವು ಈ ವಲಯದಲ್ಲಿ ಎಫ್‌ಡಿಐ ನಿಯಮಗಳನ್ನು ಸರಳಗೊಳಿಸಿದೆ. ಇದರಿಂದ ಸ್ಪೇಸ್ ಎಕ್ಸ್ ಭಾರತದಲ್ಲಿ ನೇರವಾಗಿ ಹೂಡಿಕೆ ಮಾಡಬಹುದಾಗಿದೆ. ಸುದ್ದಿಗಳ ಪ್ರಕಾರ ಸ್ಪೇಸ್ ಎಕ್ಸ್ ಮತ್ತು ಭಾರತದ ಇಸ್ರೋ ಮಧ್ಯೆ ಒಪ್ಪಂದ ಆಗುವ ಸಾಧ್ಯತೆ ಇದೆ. ಅನ್ಯ ಗ್ರಹಗಳಿಗೆ ಯಾತ್ರೆ ಕೈಗೊಳ್ಳುವ ಯೋಜನೆಗಳಿಗೆ ಸ್ಪೇಸ್ ಎಕ್ಸ್ ನೆರವನ್ನು ಇಸ್ರೋ ಪಡೆದುಕೊಳ್ಳಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!