Daily Horoscope: ವೃಷಭ ಸಂಯೋಗ ರಾಶಿ ಫಲ; ಹೂಡಿಕೆಯಲ್ಲಿ ಗಮನಹರಿಸಬೇಕು
ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನ-ವಲನಗಳಿಂದ ಪ್ರಭಾವಿತವಾಗಿದೆ. ಇಂದಿನ (ಮೇ 15) ರ ಗ್ರಹಗಳ ಚಲನವಲನ ಹೇಗಿದೆ? ವೃಷಭ ರಾಶಿ ಫಲಾಫಲವನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.
ವೃಷಭ ರಾಶಿಯವರ ಅಂಗಾರಕ ಯೋಗದ ಫಲಾಫಲ: 7 ಮತ್ತು 12ರ ಅಧಿಪತಿಯಾಗಿರುವ ಅಂಗಾರಕ, 11ರಲ್ಲಿ ಅಂಗಾರಕ ಯೋಗ ಸಂಭವಿಸುತ್ತಿದೆ. ಪಾಪಗ್ರಹಗಳು 11ರಲ್ಲಿ ಇದ್ದಾಗ, ಫಲ, ಶುಭ ಹೆಚ್ಚಾಗಿ ಲಭಿಸುತ್ತದೆ. ಆತುರತೆ, ಗಾಬರಿ ಇರುತ್ತದೆ. ರಾಹು ಮತ್ತು ಕುಜ ಜೊತೆಯಾಗಿ ಮೀನ ರಾಶಿಯಲ್ಲಿ ಅಂಗಾರಕ ಯೋಗ ಸಂಭವಿಸುತ್ತಿರುವುದರಿಂದ, ಈ ರಾಶಿಯವರಿಗೆ ಜ್ಞಾನ ಜಾಸ್ತಿ ಇರುತ್ತದೆ. ಹೂಡಿಕೆಯಲ್ಲಿ ಗಮನಹರಿಸಬೇಕು. ಮಾತಿನಿಂದ ಲಾಭವಾಗಲಿದೆ. ಮಕ್ಕಳಿಂದ ಶುಭ ಸುದ್ದಿ ಸಿಗುತ್ತದೆ. ಹಳೆ ಕಾಯಿಲೆ ಪುನರಾವರ್ತನೆ
ಆಗಲಿದೆ.