ಹುಬ್ಬಾ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ದಿನ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

Updated on: Jun 03, 2025 | 6:50 AM

ಜೂನ್ 3, 2025 ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ಮತ್ತು ಆರೋಗ್ಯದಲ್ಲಿ ಉತ್ತಮ ಸ್ಥಿತಿ ಇರುವ ಬಗ್ಗೆ ತಿಳಿಸಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಶುಭ ದಿಕ್ಕುಗಳನ್ನು ಸೂಚಿಸಲಾಗಿದೆ.

ಇಂದು ತಾರೀಕು 3-6-2025 ಮಂಗಳವಾರ ವಿಶ್ವಾವಸು ಸಂವತ್ಸರ ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಅಷ್ಟಮಿ, ಹುಬ್ಬ ನಕ್ಷತ್ರ, ಇರುವ ಈ ದಿನದ ರಾಹುಕಾಲ 3.29 ರಿಂದ 5.5 ರ ತನಕ ರಾಹುಕಾಲ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12.17 ರಿಂದ 1.54 ನಿಮಿಷದ ತನಕ ಇರಲಿದೆ. ದ್ವಾದಶ ರಾಶಿಗಳ ಫಲಾಫಲವನ್ನು ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.