Horoscope Today 15 January; ಇಂದು 12 ರಾಶಿಗಳ ಅದೃಷ್ಟ ಫಲ ಹೇಗಿದೆ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 15 ಜನವರಿ 2026ರ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು TV9 ಡಿಜಿಟಲ್ ವಾಹಿನಿಯಲ್ಲಿ ನೀಡಿದ್ದಾರೆ. ಇದು ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲ ಆರಂಭವಾಗುವ ವಿಶೇಷ ದಿನವಾಗಿದ್ದು, ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಪ್ರಯಾಣ ಹಾಗೂ ಶುಭ-ಅಶುಭ ಫಲಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನೂ ಸೂಚಿಸಲಾಗಿದೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 15ರ ಗುರುವಾರದ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ಪುಷ್ಯಮಾಸ, ಕೃಷ್ಣಪಕ್ಷ ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿಯೋಗ ಮತ್ತು ಕೌಲವಕರಣ ಇರುವ ದಿನವಾಗಿದೆ. ರಾಹುಕಾಲವು ಮಧ್ಯಾಹ್ನ 1:54 ರಿಂದ 3:20ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:29 ರಿಂದ 1:53ರ ವರೆಗೆ ಇರುತ್ತದೆ. ಈ ದಿನದ ಪ್ರಮುಖ ಘಟನೆ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಆರಂಭ. ಸೂರ್ಯ ಭಗವಾನರು ಇಂದು ಉತ್ತರ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾರೆ. ಬೆಳಗ್ಗೆ 6:44 ರಿಂದ 10:11ರ ವರೆಗೆ ಈ ಪುಣ್ಯಕಾಲವಿರುತ್ತದೆ. ಇಂದು ಶ್ರೀರಂಗಪಟ್ಟಣದಲ್ಲಿ ಲಕ್ಷದೀಪೋತ್ಸವ, ಶಿವಗಂಗೋತ್ಪತ್ತಿ ಹಾಗೂ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ರವಿ ಮಕರ ರಾಶಿಯಲ್ಲೂ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲೂ ಸಂಚರಿಸಲಿದ್ದಾರೆ. ಇದರ ಜತೆಗೆ ಬಸವರಾಜ ಗುರೂಜಿ 12 ರಾಶಿಗಳ ಆರ್ಥಿಕ, ಉದ್ಯೋಗ, ಕೌಟುಂಬಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟದ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ಮಂತ್ರಗಳನ್ನು ತಿಳಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
