ಕೆಂಪೇಗೌಡ್ರು ಬೆಂಗಳೂರು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟು ಬಿಚ್ಚಿಟ್ಟ ಧರ್ಮೇಂದ್ರ ಕುಮಾರ್
ಬೆಂಗಳೂರಿಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದುಗಳು ಇವೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಹೌದು..ಜನವರಿ ಸಂಕ್ರಾಂತಿಯಂದೇ ಕೆಂಪೇಗೌಡರು ಬೆಂಗಳೂರು ಕಟ್ಟಲು ಶುರುಮಾಡಿದ ಪುಣ್ಯ ದಿನ. ಅವಿನ್ಯೂ ರಸ್ತೆಯಲ್ಲೇ ಭೂಮಿ ಪೂಜೆ ಮಾಡಿದ್ದರು. ಬಳಿಕ ಬೆಂಗಳೂರಿನ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ.
ಬೆಂಗಳೂರು, (ಜನವರಿ 14): ಬೆಂಗಳೂರಿಗೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದುಗಳು ಇವೆ. ಇದನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರು. ಹೌದು..ಜನವರಿ ಸಂಕ್ರಾಂತಿಯಂದೇ ಕೆಂಪೇಗೌಡರು ಬೆಂಗಳೂರು ಕಟ್ಟಲು ಶುರುಮಾಡಿದ ಪುಣ್ಯ ದಿನ. ಅವಿನ್ಯೂ ರಸ್ತೆಯಲ್ಲೇ ಭೂಮಿ ಪೂಜೆ ಮಾಡಿದ್ದರು. ಬಳಿಕ ಬೆಂಗಳೂರಿನ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ. ಅಂದಿನ ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿ, ಅಚ್ಚುಕಟ್ಟಾದ ಯೋಜನೆಯೊಂದಿಗೆ ಬೆಂಗಳೂರನ್ನು ನಿರ್ಮಿಸಿದರು. ಮುಖ್ಯ ರಸ್ತೆಗಳು, ವ್ಯಾಪಾರಿ ಕೇಂದ್ರಗಳು, ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಿಸಿ, ನಗರಕ್ಕೆ ಒಂದು ವ್ಯವಸ್ಥಿತ ಸ್ವರೂಪವನ್ನು ನೀಡಿದ್ದರು. ಇನ್ನು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು ಹೇಗೆ? ಸಂಕ್ರಾಂತಿಗೂ ಕೆಂಪೇಗೌಡ್ರಿಗೂ ಇರೋ ನಂಟನ್ನು ಧರ್ಮೇಂದ್ರ ಕುಮಾರ್ ಬಿಚ್ಚಿಟ್ಟಿದ್ದಾರೆ.

