ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚಾರ: ಇಂದಿನ ಭವಿಷ್ಯ ತಿಳಿಯಿರಿ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಅಕ್ಟೋಬರ್ 16, ಗುರುವಾರದ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ತಿಳಿಸಿಕೊಟ್ಟಿದ್ದಾರೆ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಫಲಾಫಲಗಳನ್ನು ಆಧರಿಸಿ, ಪ್ರತಿಯೊಂದು ರಾಶಿಯ ವೃತ್ತಿ, ಹಣಕಾಸು, ಸಂಬಂಧಗಳು, ಆರೋಗ್ಯ, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಅಕ್ಟೋಬರ್ 16: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಂದಿನ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ವಿಶ್ವ ವಸುನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸ, ಶರದ್ ಋತು, ಕೃಷ್ಣಪಕ್ಷ ದಶಮಿ, ಆಶ್ಲೇಷಾ ನಕ್ಷತ್ರ, ಸಾಧ್ಯಯೋಗ, ಭದ್ರಕರಣ ಇರತಕ್ಕಂತಹ ಈ ದಿನದ ರಾಹುಕಾಲ, ಸರ್ವಸಿದ್ಧಿ ಕಾಲ ಮತ್ತು ಗ್ರಹಗಳ ಸ್ಥಾನದ ಬಗ್ಗೆ ವಿವರಿಸಿದ್ದಾರೆ. ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಹಾಗೂ ಬುಧನ ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರ ಸಂಚರಿಸುತ್ತಾನೆ.
