Daily horoscope: ಅನುರಾಧ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ತಿಳಿಯಿರಿ

Updated on: Aug 31, 2025 | 6:42 AM

ಆಗಸ್ಟ್ 31 ರಂದು ಡಾ. ಬಸವರಾಜ ಗುರೂಜಿ ಅವರು ಎಲ್ಲಾ 12 ರಾಶಿಗಳಿಗೆ ದೈನಿಕ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಗೂ ಗ್ರಹಗಳ ಪ್ರಭಾವ, ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ಸೂಚಿಸಲಾಗಿದೆ. ವ್ಯಾಪಾರ, ಉದ್ಯೋಗ, ಕುಟುಂಬ ಮತ್ತು ಆರೋಗ್ಯದ ಬಗ್ಗೆ ಸಲಹೆಗಳನ್ನೂ ನೀಡಲಾಗಿದೆ.

ಬೆಂಗಳೂರು, ಆಗಸ್ಟ್​ 31: 12 ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ಈ ದಿನ ಅನುರಾಧ ನಕ್ಷತ್ರ ಹಾಗೂ ವೈದೃತಿಯೋಗ, ಭದ್ರಕರಣ ಇರುವ ಕಾರಣ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲಿರಲಿದೆ. ರಾಹುಕಾಲ ಬೆಳಿಗ್ಗೆ 4 ಗಂಟೆ 57 ನಿಮಿಷದಿಂದ 6 ಗಂಟೆ 30 ನಿಮಿಷದ ತನಕ ಇರುತ್ತದೆ ಹಾಗೂ ಶುಭ ಕಾಲ ಬೆಳಿಗ್ಗೆ 9 ಗಂಟೆ 14 ನಿಮಿಷದಿಂದ 10 ಗಂಟೆ 47 ನಿಮಿಷದ ತನಕ ಇರುತ್ತದೆ. ಇಂದು ಗಯಾಷ್ಟಮಿ, ಪುಬ್ಬ ಮಳೆ ಪ್ರಾರಂಭ, ರಾಧಾ ಜಯಂತಿ ಮತ್ತು ದೂರ್ವಾಷ್ಟಮಿ ಕೂಡ ಆಚರಿಸಲಾಗುತ್ತದೆ.