ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್

Updated on: Mar 15, 2025 | 11:54 AM

ನಟ ದರ್ಶನ್ ಅವರು ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಇದ್ದಾರೆ. ಅವರು ‘ಡೆವಿಲ್’ ಚಿತ್ರದ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾದ ಶೂಟ್ ಮತ್ತೆ ಆರಂಭ ಆಗಿದೆ. ಇಂದು ಚಿತ್ರಕ್ಕೆ ಕೊನೆಯ ದಿನ.

‘ಡೆವಿಲ್’ ಸಿನಿಮಾ  ಶೂಟ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ ಚಿತ್ರದ ಶೂಟ್ ನಡೆಯುತ್ತಿದೆ. ಮಾರ್ಚ್ 12ರಿಂದ ಶೂಟ್ ಆರಂಭ ಆಗಿದೆ. ಇಂದು (ಮಾರ್ಚ್ 15) ಮೈಸೂರಿನಲ್ಲಿ ಚಿತ್ರಕ್ಕೆ ಕೊನೆಯ ದಿನದ ಶೂಟ್. ಇದಾದ ಬಳಿಕ ಚಿತ್ರತಂಡ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಲಿದೆ ಎನ್ನಲಾಗಿದೆ. ದರ್ಶನ್ ಅವರಿಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿದೆ. ಈ ಕಾರಣದಿಂದ ಕೇವಲ ಮಾತಿನ ದೃಶ್ಯದ ಶೂಟ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More