Darshan: ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?

|

Updated on: Jul 08, 2024 | 8:14 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಹೊರಗೆ ಐಶಾರಾಮಿ ಜೀವನ ನಡೆಸಿಕೊಂಡಿದ್ದ ದರ್ಶನ್ ಜೈಲಿನಲ್ಲಿ ಬಂಧಿಯಾಗಿ ಇಕ್ಕಟ್ಟಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಈಗ ಅವರ ದೇಹದ ತೂಕ ಸಾಕಷ್ಟು ಇಳಿಯುತ್ತಿದೆ.

ನಟ ದರ್ಶನ್ ಅವರು ಜೈಲಿನಲ್ಲಿದ್ದು ಒಂದು ತಿಂಗಳು ಆಗುತ್ತಾ ಬಂದಿದೆ. ಹೊರಗಿದ್ದಾಗ ಅವರು ಮಾಂಸದೂಟ ಮಾಡಿಕೊಂಡು ಹಾಯಾಗಿ ಇದ್ದರು. ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಆದರೆ, ಜೈಲಿನಲ್ಲಿ ಆ ರೀತಿ ಇಲ್ಲ. ಜೈಲಿನ ಇತರ ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ದರ್ಶನ್ ಅವರಿಗೆ ನಿತ್ಯ ಚಿಂತೆ ಕಾಡುತ್ತಿದೆ. ಯಾವಾಗ ಹೊರಗೆ ಬರುತ್ತೇನೋ ಎನ್ನುವ ಆತಂಕ ಮೂಡಿದೆ. ಹೀಗಾಗಿ ಅವರು ಜೈಲಿನಲ್ಲಿ ಸರಿಯಾಗಿ ಊಟ ಮಾಡುತ್ತಿಲ್ಲ. ಈ ಕಾರಣದಿಂದಲೇ ಅವರು 25 ದಿನಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಇದರಿಂದ ದರ್ಶನ್ ಮತ್ತಷ್ಟು ಸೊರಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.