ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ

|

Updated on: Oct 03, 2024 | 5:45 PM

Darshan Thoogudeepa Case: ದರ್ಶನ್ ಬಳ್ಳಾರಿ ಜೈಲು ಸೇರಿ ತಿಂಗಳಿಗೂ ಹೆಚ್ಚು ಸಮಯವಾಗಿದೆ. ಇದೀಗ ಅಪ್ಪನನ್ನು ಕಾಣಲು ದರ್ಶನ್ ಪುತ್ರ ವಿನೀಶ್ ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ವಿಡಿಯೋ ಇಲ್ಲಿದೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ದರ್ಶನ್ ಅನ್ನು ಕಾಣಲು ಪತ್ನಿ ವಿಜಯಲಕ್ಷ್ಮಿ, ವಕೀಲರು ವಾರಕ್ಕೊಮ್ಮೆ ಬರುತ್ತಲೇ ಇರುತ್ತಾರೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಅವರ ತಾಯಿ, ಸಹೋದರ, ಸಹೋದರಿ ಸಹ ಬಂದು ಹೋಗಿದ್ದರು. ಆದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಮಗ ವಿನೀಶ್ ಅಪ್ಪನ ನೋಡಲು ಬಂದಿರಲಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಬಂದು ಹೋಗಿದ್ದರು. ಇದೀಗ ಇಂದು (ಅಕ್ಟೋಬರ್ 03) ರಂದು ದರ್ಶನ್ ಪುತ್ರಿ ವಿನೀಶ್, ತಾಯಿ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್ ಸಹ ಮಗನ ಕಾಣಲು ಖುಷಿಯಿಂದಲೇ ಸಂದರ್ಶಕರ ಕೊಠಡಿಗೆ ತೆರಳಿದ್ದು ಕಂಡು ಬಂತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ