ಬೆಂಗಳೂರಿನ ಸರ್ಕಾರೀ ಶಾಲೆಯೊಂದಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ತಿನ್ನಿಸಿದರು!

|

Updated on: Aug 19, 2023 | 3:55 PM

ನಗರದ ಶಾಲೆಯೊಂದಕ್ಕೆ ಭೇಟಿ ನೀಡಿದ ಡಿಕೆ  ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಬನ್ನು ತಿನ್ನಿಸಿದರು. ಖುದ್ದು ಶಿವಕುಮಾರ್ ಚಿಕ್ಕಿ ತಿಂದಿದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಅವರು ಮಕ್ಕಳೊಂದಿಗೆ ಫೋಟೋ ಕೂಡ ತೆಗೆಸಿಕೊಂಡರು.

ಬೆಂಗಳೂರು: ನಗರದ ಸರ್ಕಾರೀ ಶಾಲೆಯೊಂದರ ವಿದ್ಯಾರ್ಥಿಗಳಾಗಿರುವ ಈ ಮಕ್ಕಳ ಅದೃಷ್ಟವೋ ಅದೃಷ್ಟ ಮಾರಾಯ್ರೇ. ಮತ್ತೇನು? ರಾಜ್ಯದ ಉಪ ಮುಖ್ಯಮಂತ್ರಿಯ (deputy CM ) ಕೈಯಾರೆ ಮೊಟ್ಟೆ, ಬಾಳೆಹಣ್ಣು, ಬನ್ನು, ಚಿಕ್ಕಿ ತಿನ್ನುವುದೆಂದರೆ ಸುಮ್ಮೇನಾ? ಯಾರಿಗುಂಟು ಯಾರಿಗಿಲ್ಲ ಇಂಥ ಅದೃಷ್ಟ! ಹಾಸನ ಜಿಲ್ಲೆಯ ಗ್ರಾಮವೊಂದರ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆಗಳ ಸರಬರಾಜು ಪ್ರಕರಣದ ಬಳಿಕ ಎಚ್ಚೆತ್ತಿಕೊಂಡಂತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ (Siddaramaiah government) ಶಾಲಾ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಕಡೆ ಹೆಚ್ಚು ಮುತುವರ್ಜಿ ವಹಿಸುತ್ತಿರುವುದರಲ್ಲಿ ಅನುಮಾನವಿಲ್ಲ. ನಗರದ ಶಾಲೆಯೊಂದಕ್ಕೆ ಭೇಟಿ ನೀಡಿದ ಡಿಕೆ  ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಬನ್ನು ತಿನ್ನಿಸಿದರು. ಖುದ್ದು ಶಿವಕುಮಾರ್ ಚಿಕ್ಕಿ ತಿಂದಿದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಅವರು ಮಕ್ಕಳೊಂದಿಗೆ ಫೋಟೋ ಕೂಡ ತೆಗೆಸಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ