ಚುನಾಯಿತ ಸರ್ಕಾರಗಳನ್ನು ಬಿಜೆಪಿ ಉರುಳಿಸುವುದು ಸರಿಯಾದರೆ; ಕಾಂಗ್ರೆಸ್ ಬಿಟ್ಟು ಹೋದವರು ವಾಪಸ್ಸು ಬಂದರೆ ತಪ್ಪಿಲ್ಲ: ಡಿಕೆ ಶಿವಕುಮಾರ್
ಕೆಲ ಬಿಜೆಪಿ ಶಾಸಕರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಬಿಟ್ಟು ಹೋದವರು ವಾಪಸ್ಸಾಗಲು ತವಕಿಸುತ್ತಿರುವ ಬಗ್ಗೆ ಕೇಳಿದಾಗ ಶಿವಕುಮಾರ್, ಕಾಂಗ್ರೆಸ್ ಪಕ್ಷ ಸಮುದ್ರದ ಹಾಗೆ, ಬರಲಿಚ್ಛಿಸುವವರು ಬರಬಹುದು, ಅದರಲ್ಲೇನೂ ತಪ್ಪಿಲ್ಲ ಎಂದರು.
ಬೆಂಗಳೂರು: ಆಗಸ್ಟ್ 23 ರಂದು ಬಿಜೆಪಿಯ ಉದ್ದೇಶಿತ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ (democracy), ಪ್ರತಿಭಟನೆ ಮಾಡುವವರಿಗೆ ತಡೆಯಲಾದೀತೆ? ಅದರೆ, ಮೊದಲು ಅವರು ತಮ್ಮ ಪಕ್ಷಕ್ಕೆ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಅಂತ ಮಾರ್ಮಿಕವಾಗಿ ಹೇಳಿದರು. ಕೆಲ ಬಿಜೆಪಿ ಶಾಸಕರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಬಿಟ್ಟು ಹೋದವರು ವಾಪಸ್ಸಾಗಲು ತವಕಿಸುತ್ತಿರುವ ಬಗ್ಗೆ ಕೇಳಿದಾಗ ಶಿವಕುಮಾರ್, ಕಾಂಗ್ರೆಸ್ ಪಕ್ಷ ಸಮುದ್ರದ (ocean) ಹಾಗೆ, ಬರಲಿಚ್ಛಿಸುವವರು ಬರಬಹುದು, ಅದರಲ್ಲೇನೂ ತಪ್ಪಿಲ್ಲ ಎಂದರು. ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು ತಪ್ಪಲ್ಲವಾದರೆ, ವಾಪಸ್ಸು ಬರೋದು ಕೂಡ ತಪ್ಪಲ್ಲ; ಕರ್ನಾಟಕದಲ್ಲಿ, ಮಧ್ಯ ಪ್ರದೇಶದಲ್ಲಿ ಮತ್ತು ಮಹಾರಾಷ್ಟ್ರ ಮೊದಲಾದ ಕಡೆಗಳಲ್ಲಿ ಬಿಜೆಪಿ ಮಾಡಿದ್ದು ಸರಿಯಾದರೆ, ವಲಸೆ ಹೋದವರು ವಾಪಸ್ಸು ಬರೋದ್ರಲ್ಲಿ ತಪ್ಪಿಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ