ರಾಜ್ಯದಲ್ಲಿ ಯಡಿಯೂರಪ್ಪನವರ ಮಹತ್ವ ಬಿಜೆಪಿ ವರಿಷ್ಠರಿಗೆ ಅರ್ಥವಾಗುವಷ್ಟರಲ್ಲಿ ಬಹಳ ತಡವಾಗಿಬಿಟ್ಟಿತ್ತು: ಪ್ರಿಯಾಂಕ್ ಖರ್ಗೆ, ಸಚಿವ
ರಾಜ್ಯದಲ್ಲಿ ಯಡಿಯೂರಪ್ಪ ಎಷ್ಟು ಜನಪ್ರಿಯ ಅನ್ನೋದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದ ಖರ್ಗೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು, ವೇದಿಕೆಗಳ ಮೇಲೆ ಮೂಲೆಗುಂಪು ಮಾಡಿ ಅವರು ಕಣ್ಣೀರು ಹಾಕುವಂತೆ ಮಾಡಲಾಯಿತು ಎಂದು ಹೇಳಿದರು.
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಶಾಲಿ ಮತ್ತು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಮೂಲೆಗುಂಪು ಮಾಡಿದ ಬಳಿಕ ಆ ಪಕ್ಷವೀಗ ಮುಳುಗುವ ಹಡಗಿನಂತಾಗಿರುವುದರಿಂದ (sinking ship) ಅದರ ಕ್ಯಾಪ್ಟನ್ ಆಗಲು ಯಾರೂ ಸಿದ್ಧರಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅವರ ಮಾತಿಗೆ ಕೇಂದ್ರದ ನಾಯಕರೂ ಸೇರಿದಂತೆ ಯಾರೂ ಬೆಲೆ ನೀಡಲಿಲ್ಲ, ರಾಜ್ಯದಲ್ಲಿ ಅವರೆಷ್ಟು ಜನಪ್ರಿಯ ಅನ್ನೋದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದ ಖರ್ಗೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು, ವೇದಿಕೆಗಳ ಮೇಲೆ ಮೂಲೆಗುಂಪು ಮಾಡಿ ಅವರು ಕಣ್ಣೀರು ಹಾಕುವಂತೆ ಮಾಡಲಾಯಿತು ಎಂದು ಹೇಳಿದರು. ರಾಜ್ಯದಲ್ಲಿ ಯಡಿಯೂರಪ್ಪ ಅವರ ಮಹತ್ವ, ಪ್ರಾಬಲ್ಯ ಮತ್ತು ಪ್ರಸ್ತುತತೆ ಕೇಂದ್ರದ ನಾಯಕರಿಗೆ ಅರಿವಾಗುವಷ್ಟರಲ್ಲಿ ಬಹಳ ತಡವಾಗಿಬಿಟ್ಟಿತ್ತು, ಜನ ಅದಾಗಲೇ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ