Udyan Express Fire mishap; ಎಂಜಿನ್​ನಲ್ಲಿ ಹೊತ್ತಿದ ಬೆಂಕಿ ನಂದಿದ ಬಳಿಕ ಪ್ಲಾಟ್​ಫಾರ್ಮ್ ಅನ್ನು ಹೊಗೆ ಆವರಿಸಿತ್ತು: ರೇಲ್ವೇ ಉದ್ಯೋಗಿ-ಪ್ರತ್ಯಕ್ಷದರ್ಶಿ

Udyan Express Fire mishap; ಎಂಜಿನ್​ನಲ್ಲಿ ಹೊತ್ತಿದ ಬೆಂಕಿ ನಂದಿದ ಬಳಿಕ ಪ್ಲಾಟ್​ಫಾರ್ಮ್ ಅನ್ನು ಹೊಗೆ ಆವರಿಸಿತ್ತು: ರೇಲ್ವೇ ಉದ್ಯೋಗಿ-ಪ್ರತ್ಯಕ್ಷದರ್ಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 19, 2023 | 12:44 PM

ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಗಿದೆಯಾದರೂ ಫೈರ್ ಎಂಜಿನ್ ಸ್ಥಳಕ್ಕೆ ತಲುಪುವುದು ಕೊಚ ತಡವಾಗಿದೆ. ಅದು ಆಗಮಿಸುವ ಮೊದಲು ನಿಲ್ದಾಣದಲ್ಲಿದ್ದ ರೇಲ್ವೇ ಸಿಬ್ಬಂದಿ ಮತ್ತು ಬೇರೆ ಜನ ಬಕೆಟ್ ಗಳಿಂದ ನೀರು ಎಸೆದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರು: ನಗರದ ಮಜೆಸ್ಟಿಕ್ ಪ್ರದೇಶದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೇ ಜಂಕ್ಷನ್ (KSR Railway Junction) ನಲ್ಲಿ ಇಂದು ಬೆಳಗ್ಗೆ ಮುಂಬೈನಿಂದ ಆಗಮಿಸಿದ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ (Udyan Express) ಬೆಂಕಿ ಅನಾಹುತ ಸಂಭವಿಸಿದೆ, ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ. ರೇಲ್ವೇಸ್ ಇಲಾಖೆಯ ಉದ್ಯೋಗಿಯಾಗಿರುವ ಈ ಮಹಿಳೆ (women Railway employee) ಹೇಳುವ ಪ್ರಕಾರ ಟ್ರೇನು ಇಂದು ನಿಗದಿತ ಸಮಯಕ್ಕಿಂತ ಮೊದಲೇ ಬೆಂಗಳೂರು ನಗರಕ್ಕೆ ಆಗಮಿಸಿದೆ ಮತ್ತು ಪ್ರಯಾಣಿಕರೆಲ್ಲ ಇಳಿದ ಬಳಿಕ ಹೊಗೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಗಿದೆಯಾದರೂ ಫೈರ್ ಎಂಜಿನ್ ಸ್ಥಳಕ್ಕೆ ತಲುಪುವುದು ಕೊಚ ತಡವಾಗಿದೆ. ಅದು ಆಗಮಿಸುವ ಮೊದಲು ನಿಲ್ದಾಣದಲ್ಲಿದ್ದ ರೇಲ್ವೇ ಸಿಬ್ಬಂದಿ ಮತ್ತು ಬೇರೆ ಜನ ಬಕೆಟ್ ಗಳಿಂದ ನೀರು ಎಸೆದು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಅರಿದ ಬಳಿಕ ಪ್ಲಾಟ್ ಫಾರ್ಮ್ ಅನ್ನು ಹೊಗೆ ಆವರಿಸಿಕೊಂಡಿತ್ತು ಎಂದು ಮಹಿಳಾ ಉದ್ಯೋಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 19, 2023 12:43 PM