ಬೆಂಗಳೂರು; ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಹೊತ್ತಿಕೊಂಡ ಕಾರಣವನ್ನು ಈಗಲೇ ನಿರ್ದಿಷ್ಟವಾಗಿ ಹೇಳುವುದು ಕಷ್ಟ: ಡಾ ಎಸ್ ಕೆ ಸೌಮ್ಯಲತಾ, ಎಸ್ ಪಿ- ರೇಲ್ವೇಸ್
ಉದ್ಯಾನ್ ರೈಲು ಪ್ಲಾಟ್ ಫಾರ್ಮ್ ಗೆ ಬೆಳಗ್ಗೆ 6 ಗಂಟೆಗೆ ಆಗಮಿಸಿದೆ ಮತ್ತು ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು 7.30 ಕ್ಕೆ, ನಂತರ ಬೆಂಕಿ ಅದರ ಪಕ್ಕದ ಕೋಚ್ ಗೂ ವ್ಯಾಪಿಸಿದ್ದರಿಂದ ಅದಕ್ಕೂ ಹಾನಿಯುಂಟಾಗಿದೆ ಎಂದು ಸೌಮ್ಯಲತಾ ಹೇಳಿದರು.
ಬೆಂಗಳೂರು: ಈಗಾಗಲೇ ವರದಿ ಮಾಡಿರುವಂತೆ ನಗರದ ಸಂಗೊಳ್ಳಿ ರಾಯಣ್ಣ ರೇಲ್ವೇ ಜಂಕ್ಷನ್ ನಲ್ಲಿ (KSR Bengaluru ) ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ (Udyan Express) ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಗ್ನಿ ಅವಗಢದ ಬಗ್ಗೆ ವಿವರಣೆ ನೀಡಿದ ರೇಲ್ವೇಸ್ ಪೊಲೀಸ್ ವರಿಷ್ಠಾಧಿಕಾರಿ ಡಾ ಎಸ್ ಕೆ ಸೌಮ್ಯಲತಾ (Dr SK Soumyalatha), ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ, ಪ್ರಯಾಣಿಕರೆಲ್ಲ ರೈಲಿಂದ ಕೆಳಗಳಿದು ಬಳಿಕ ಟ್ರೇನಿನ ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದರು. ಉದ್ಯಾನ್ ರೈಲು ಪ್ಲಾಟ್ ಫಾರ್ಮ್ ಗೆ ಬೆಳಗ್ಗೆ 6 ಗಂಟೆಗೆ ಆಗಮಿಸಿದೆ ಮತ್ತು ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು 7.30 ಕ್ಕೆ, ನಂತರ ಬೆಂಕಿ ಅದರ ಪಕ್ಕದ ಕೋಚ್ ಗೂ ವ್ಯಾಪಿಸಿದ್ದರಿಂದ ಅದಕ್ಕೂ ಹಾನಿಯುಂಟಾಗಿದೆ ಎಂದು ಸೌಮ್ಯಲತಾ ಹೇಳಿದರು. ಯಾವ ಕಾರಣಕ್ಕೆ ಬೆಂಕಿ ಅವಗಢ ಸಂಭವಿಸಿದೆ ಅಂತ ಈಗಲೇ ಹೇಳುವುದು ಕಷ್ಟ, ತನಿಖೆಯ ಬಳಿಕ ಅದು ಗೊತ್ತಾಗಲಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ