Karnataka Assembly Polls: ಮಾಕೋನಹಳ್ಳಿಯ ವಧು ಪ್ರದರ್ಶಿಸಿರುವ ಬದ್ಧತೆ ಎಲ್ಲರಲ್ಲೂ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತದೆ!
ಚಿತ್ರನಟಿ ಸೌಂದರ್ಯಳಂತೆ ಕಾಣುವ ಮಾಕೋಮಹಳ್ಳಿಯ ಸುಂದರ ಮದುಮಗಳು ತೋರಿದ ಬದ್ಧತೆ ಎಲ್ಲರಲ್ಲೂ ಬಂದರೆ ಎಷ್ಟು ಚೆನ್ನ!
ಚಿಕ್ಕಮಗಳೂರು: ಈ ಸುಂದರ ಯುವತಿಯ ಸಾಮಾಜಿಕ ಬದ್ಧತೆಯನ್ನು (social commitment) ಮೆಚ್ಚಿ ಅಭಿನಂದಿಸಲೇಬೇಕು ಮಾರಾಯ್ರೇ. ನಮ್ಮಲ್ಲಿ ಬಹಳ ಜನಕ್ಕೆ ಮತದಾನ ಮಾಡುವುದು ಅಂದರೆ ಒಂದು ಪರ್ವತ ಹೊತ್ತು ಹಾಗೆ. ಮನೇಲಿ ಬಿದ್ದುಕೊಂಡಿರುತ್ತಾರೆಯೇ ಹೊರತು ಒಂದೈವತ್ತು ಗಜದಷ್ಟು ದೂರವಿರುವ ಮತಗಟ್ಟೆಗೆ ಹೋಗಿ ವೋಟು ಹಾಕಲಾರರು. ಆದರೆ, ಜಿಲ್ಲೆಯು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ (Makonahalli) ಹೆಸರಿನ ಗ್ರಾಮದಲ್ಲಿ ಮದುಮಗಳೊಬ್ಬರು (bride) ಮದುವೆ ಚಪ್ಪರಕ್ಕೆ ಹೋಗುವ ಮೊದಲು ಮತಗಟ್ಟೆಗೆ ಹೋಗಿ ಮಾತದಾನ ಮಾಡಿದ್ದಾರೆ. ಮತದಾನಕ್ಕೆ ಸಂಬಂಧಿಸಿದಂತೆ ಪ್ರತಿ ಅರ್ಹ ಮತದಾರ ಇಂಥ ಸಂಕಲ್ಪ, ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ (democratic setup) ಮತ್ತಷ್ಟು ಸುಂದರವೆನಿಸಿಕೊಳ್ಳುತ್ತದೆ. ಚಿತ್ರನಟಿ ಸೌಂದರ್ಯಳಂತೆ ಕಾಣುವ ಮಾಕೋಮಹಳ್ಳಿಯ ಸುಂದರ ಮದುಮಗಳಿಗೆ ನಮ್ಮದೊಂದು ಸಲಾಂ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ