ತಮ್ಮ ಹಿಂದೆ ನಿಂತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ರನ್ನು ಸಿಎಂ ಸಿದ್ದರಾಮಯ್ಯ ಮುಂದೆ ಕರೆದಾಗ ಡಿಸಿಎಂ ಶಿವಕುಮಾರ್ ಇಬ್ಬರೆಡೆ ನೋಡಿದರು

|

Updated on: Aug 29, 2023 | 11:57 AM

ಈಗಾಗಲೇ ವರದಿ ಮಾಡಿರುವ ಹಾಗೆ, ಕಾಂಗ್ರೆಸ್ ವರಿಷ್ಠ ನಾಯಕರು-ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಉಪಸ್ಥಿಯಲ್ಲಿ ಗೃಹ ಲಕ್ಷ್ಮಿ ಲಾಂಚ್ ಕಾರ್ಯಕ್ರಮ ನಾಳೆ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತಾಡಿದರು.

ಮೈಸೂರು: ಗೃಹ ಲಕ್ಷ್ಮಿ ಯೋಜನೆಯ (Gruha Lakshmi scheme) ಉದ್ಘಾಟನೆಯನ್ನು ಸ್ಮರಣೀಯವಾಗಿಸಲು ಸಿದ್ದರಾಮಯ್ಯ (CM Siddaramaiah) ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ, ಕಾಂಗ್ರೆಸ್ ವರಿಷ್ಠ ನಾಯಕರು-ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಉಪಸ್ಥಿಯಲ್ಲಿ ಗೃಹ ಲಕ್ಷ್ಮಿ ಲಾಂಚ್ ಕಾರ್ಯಕ್ರಮ ನಾಳೆ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಮಾತಾಡಿದರು. ನಾಳಿನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಜೂಮ್ ನಲ್ಲಿ ನೋಡುವ ವ್ಯವಸ್ಥೆ ಮಾಡಲಾಗಿದೆ, ಮಾಧ್ಯಮ ಮಿತ್ರರು ಸಹ ಕಾರ್ಯಕ್ರಮಕ್ಕೆ ಹೆಚ್ಚಿನ ಕವರೇಜ್ ನೀಡಿ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಬಲಭಾಗದಲ್ಲಿ ನಿಂತು ಶಿವಕುಮಾರ್ ಹೇಳುತ್ತಿದ್ದಾಗ, ಮುಖ್ಯಮಂತ್ರಿಯವರು ತಮ್ಮ ಎಡಭಾಗದ ಹಿಂಭಾಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ನಿಂತಿರುವುದನ್ನು ಗಮನಿಸುತ್ತಾರೆ. ಕೂಡಲೇ ಅವರು ಮುಂದೆ ಬರುವಂತೆ ಸಚಿವೆಯನ್ನು ಕರೆದು ತಮ್ಮ ಪಕ್ಕ ನಿಲ್ಲಿಸಿಕೊಳ್ಳುತ್ತಾರೆ. ತಮ್ಮ ಮಾತಿನ ಓಘಕ್ಕೆ ಕಡಿವಾಣ ಬಿದ್ದಂತಾಗಿ ಶಿವಕುಮಾರ್ ಲಕ್ಷ್ಮಿಯವರ ಕಡೆ ನೋಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on