Video: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ

Updated on: Dec 29, 2025 | 11:30 AM

ದಕ್ಷಿಣ ಮೆಕ್ಸಿಕೋದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಅಪಘಾತದಿಂದಾಗಿ ಪೆಸಿಫಿಕ್ ಮಹಾಸಾಗರವನ್ನು ಮೆಕ್ಸಿಕೋ ಕೊಲ್ಲಿಯೊಂದಿಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇಂಟರ್ ಓಷಿಯಾನಿಕ್ ರೈಲು ನಿಜಾಂಡಾ ಪಟ್ಟಣದ ಬಳಿ ಹಾದುಹೋಗುವಾಗ ಹಳಿತಪ್ಪಿತು.

ಮೆಕ್ಸಿಕೋ, ಡಿಸೆಂಬರ್ 29: ದಕ್ಷಿಣ ಮೆಕ್ಸಿಕೋದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಅಪಘಾತದಿಂದಾಗಿ ಪೆಸಿಫಿಕ್ ಮಹಾಸಾಗರವನ್ನು ಮೆಕ್ಸಿಕೋ ಕೊಲ್ಲಿಯೊಂದಿಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇಂಟರ್ ಓಷಿಯಾನಿಕ್ ರೈಲು ನಿಜಾಂಡಾ ಪಟ್ಟಣದ ಬಳಿ ಹಾದುಹೋಗುವಾಗ ಹಳಿತಪ್ಪಿತು.

ಓಕ್ಸಾಕ ಮತ್ತು ವೆರಾಕ್ರೂಜ್ ಅನ್ನು ಸಂಪರ್ಕಿಸುವ ರೈಲು ಅಪಘಾತ ಸಂಭವಿಸಿದಾಗ 241 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಇಂಟರ್‌ಓಷಿಯಾನಿಕ್ ರೈಲನ್ನು 2023 ರಲ್ಲಿ ಆಗಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಉದ್ಘಾಟಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ