AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಗ್ಯಾಂಗ್​​ ಎಸ್ಕೇಪ್​

ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಗ್ಯಾಂಗ್​​ ಎಸ್ಕೇಪ್​

ರಾಮ್​, ಮೈಸೂರು
| Edited By: |

Updated on: Dec 29, 2025 | 11:47 AM

Share

ಚಿನ್ನದಂಗಡಿಗೆ ನುಗ್ಗಿದ ಗ್ಯಾಂಗ್​​ ಕೇವಲ ಐದೇ ನಿಮಿಷಗಳಲ್ಲಿ ಕೆಜಿಗಟ್ಟಲೆ ಬಂಗಾರ ದರೋಡೆ ನಡೆಸಿ ಎಸ್ಕೇಪ್​​ ಆಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಲ್ಲಿ ನಡೆದಿದೆ. ರಾಬರಿ ನಡೆಸಿ ಆರೋಪಿಗಳು ಎಸ್ಕೇಪ್​​ ಆಗುತ್ತಿರುವ Exclusive ದೃಶ್ಯ ಟಿವಿ9ಗೆ ಲಭ್ಯವಾಗಿದ್ದು, ರಾಬರಿ ಗ್ಯಾಂಗ್​​ ಪ್ಲ್ಯಾನ್​​ ಕಂಡು ಪೊಲೀಸರೇ ಶಾಕ್​​ ಆಗಿದ್ದಾರೆ.

ಮೈಸೂರು, ಡಿಸೆಂಬರ್​​ 29: ಹುಣಸೂರು ಚಿನ್ನದಂಗಡಿ ದರೋಡೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್​​ ಆಗಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಕೇವಲ ಐದೇ ಐದು ನಿಮಿಷಗಳಲ್ಲಿ ಗೋಲ್ಡ್​​ ಶಾಪ್​​ ರಾಬರಿ ನಡೆಸಲಾಗಿದ್ದು, ಕೆಜಿಗಟ್ಟಲೆ ಚಿನ್ನ ಕದ್ದು ಚಾಲಾಕಿಗಳು ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಅಂಗಡಿಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್​​ 2 ಗಂಟೆ 9 ನಿಮಿಷಕ್ಕೆ ಶಾಪ್​​ನಿಂದ ತೆರಳಿದೆ. ಚಿನ್ನ ತೆಗೆದುಕೊಂಡ ಹೋಗಲು ಎರಡು ಚೀಲದಂತಹ ಬ್ಯಾಗ್ ತಂದಿದ್ದ ದರೋಡೆಕೋರರು, ಚಿನ್ನದಂಗಡಿಯ ಶೋಕೆಸ್​​ನಲ್ಲಿಟ್ಟಿದ್ದ ದೊಡ್ಡ ದೊಡ್ಡ ಗಾತ್ರದ ಆಭರಣವನ್ನ ಎರಡಲೇ ನಿಮಿಷದಲ್ಲಿ ಒಂದು ಕಡೆ ಗುಡ್ಡೆ ಹಾಕಿದ್ದಾರೆ. ಬಳಿಕ ಮತ್ತೆರಡು ನಿಮಿಷದಲ್ಲಿ ದೊಡ್ಡ ಬ್ಯಾಗ್​​​ಗೆ ಅವನ್ನು ತುಂಬಿಕೊಂಡು ಎಸ್ಕೇಪ್​​ ಆಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.