AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬಯಲಾಗಿತ್ತಿವೆ. ದರೋಡೆಕೋರರು ಕೇವಲ 2 ಕೋಟಿ ರೂ. ಕದಿಯಲು ಪ್ಲಾನ್​​ ಮಾಡಿದ್ದರು. ಆದರೆ 7.11 ಕೋಟಿ ರೂ. ದರೋಡೆ ಮಾಡಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್
bangaluru Robbery Case
ಗಂಗಾಧರ​ ಬ. ಸಾಬೋಜಿ
|

Updated on:Nov 30, 2025 | 7:32 AM

Share

ಬೆಂಗಳೂರು, ನವೆಂಬರ್ 30: ಎಟಿಎಂ ವಾಹನವನ್ನ ಹೊತ್ತೊಯ್ದು, 7 ಕೋಟಿ ರೂ ದೋಚಿದ್ದ ಕೇಸ್​​​ (Robbery Case) ಸಿಲಿಕಾನ್ ಸಿಟಿ ಪೊಲೀಸರ (bangaluru police) ನಿದ್ದೆ ಭಂಗ ಮಾಡಿತ್ತು. ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿರಂತರ ವಿಚಾರಣೆ ನಡೆಸಿದ್ದು, ಮತ್ತಷ್ಟು ಸಂಗತಿಗಳು ಬಯಲಾಗಿವೆ. ಅಂದು ರಾಬರ್ಸ್ 2 ಕೋಟಿ ರೂ. ಕದಿಯಲು ಹೋಗಿ 7 ಕೋಟಿ ರೂ. ಕದ್ದಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ: ಕ್ಸೇವಿಯರ್ ಮಾತು ಕೇಳಿ ದರೋಡೆಗೆ ರೆಡಿಯಾಗಿದ್ದ ಗ್ಯಾಂಗ್​

ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಮಾಡಲು 3 ತಿಂಗಳಿಂದ ಗ್ಯಾಂಗ್​ ಸ್ಕೆಚ್​ ಹಾಕಿತ್ತು. ಈ ಪೈಕಿ ಸಿಎಂಎಸ್ ವಾಹನದ ಮಾಜಿ ಉದ್ಯೋಗಿ ಕ್ಸೇವಿಯರ್​​​ ಮಾಡಿದ್ದ ಮಸಲತ್ತು ಬಟಾಬಯಲಾಗಿದೆ. ಎಟಿಎಂ ವಾಹನದಲ್ಲಿ 7 ಕೋಟಿ ರೂ ಸಾಗಿಸುವುದು ಕಾನೂನು ಬಾಹಿರ. 5 ಕೋಟಿಗಿಂತ ಹೆಚ್ಚು ಹಣ ಸಾಗಿಸಲು ಅನುಮತಿ‌ ಇಲ್ಲವಂತೆ. ಹೀಗಾಗಿ ಆ ಎಟಿಎಂ ವಾಹನದಲ್ಲಿ 2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ ಎಂದು ಬಣ್ಣ ಬಣ್ಣದ ಮಾತನ್ನ ಹೇಳಿ ಕ್ಸೇವಿಯರ್​​ ದರೋಡೆ ಮಾಡಲು ಗ್ಯಾಂಗ್​​ ರೆಡಿ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ

ಆತನ ಮಾತಿನಂತೆ 2 ಕೋಟಿ ರೂ. ಮಾತ್ರ ರಾಬರಿ ಮಾಡಲು ಪ್ಲಾನ್ ಆಗಿತ್ತು. ಹಾಗೆ ಒಂದೊಂದು ಬಾಕ್ಸ್​ನಲ್ಲಿ 50 ಲಕ್ಷ ರೂ. ಮಾತ್ರ ಇರುತ್ತದೆ. ಒಟ್ಟು ನಾಲ್ಕು ಬಾಕ್ಸ್ ರಾಬರಿ ಮಾಡಿದರೆ ಅಲ್ಲಿಗೆ 2 ಕೋಟಿ ರೂ ಆಗುತ್ತದೆ ಎಂದು ಗ್ಯಾಂಗ್​​ ನಂಬಿತ್ತು. ಅದರಂತೆ ಅಂದು ಎಟಿಎಂ ವಾಹನದಲ್ಲಿ 2 ಕೋಟಿ ರೂ. ರಾಬರಿಗೆ ಸ್ಕೆಚ್ ಹಾಕಿ ಸಿಎಎಂಎಸ್​ ವ್ಯಾನ್​​ನಿಂದ 4 ಬಾಕ್ಸ್​ಗಳನ್ನ ಮಾತ್ರ ಶಿಫ್ಟ್ ಮಾಡಿಕೊಂಡಿದ್ದರು. ಆದರೆ ದರೋಡೆಕೋರರು ಅಂದುಕೊಂಡಿದ್ದೇ ಒಂದು, ಆಗಿದ್ದು ಮಾತ್ರ ಇನ್ನೊಂದು.

ದರೋಡೆ ಮಾಡಿರುವುದು 7 ಕೋಟಿ ರೂ ಅಂತಾ ತಿಳಿದು ಶಾಕ್!

ದರೋಡೆಕೋರರ ಗ್ಯಾಂಗ್​​ 2 ಕೋಟಿ ರೂ. ಅಂತಾ ತಿಳಿದು ಬರೋಬ್ಬರಿ 7 ಕೋಟಿ ರೂ ರಾಬರಿ ಮಾಡಿದ್ದರು. ಈ ಹಣವನ್ನ ದಾರಿಯಲ್ಲಿ ಚೀಲಗಳಿಗೆ ತುಂಬಿಕೊಂಡು ಬಾಕ್ಸ್​ಗಳನ್ನ ಎಸದಿದ್ದರು. ಬಳಿಕ ಚಿತ್ತೂರಿನಲ್ಲಿ ಆರೋಪಿಗಳೆಲ್ಲಾ ಸ್ವಲ್ಪ ಹಂಚಿಕೊಂಡಿದ್ದಾರೆ. ಆ ವೇಳೆಯೂ ತಮ್ಮ ಬಳಿ 7 ಕೋಟಿ ರೂ. ಇದೆ ಅಂತ ಗೊತ್ತಿರಲಿಲ್ಲ. ಕೊನೆಗೆ ಕುಪ್ಪಂ ತಲುಪಿದ ಮೇಲೆ ಪಾಳು ಮನೆಯಲ್ಲಿ ಹಣ ಸುರಿದು ಲೆಕ್ಕ ಹಾಕಿದ್ದು, ರಾಬರಿಗೆ ಪ್ಲಾನ್ ಮಾಡಿದ್ದು, 2 ಕೋಟಿ ರೂ.ಗೆ ಮಾತ್ರ, ಆದರೆ ಸಿಕ್ಕಿರುವುದು 7 ಕೋಟಿ ರೂ ಅಂತಾ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್​: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?

7 ಕೋಟಿ ರೂ. ಬ್ಯಾಂಕ್ ಹಣ ಆಗಿರುವುದರಿಂದ ಪೊಲೀಸರ ಭಯ ಶುರುವಾಗಿದೆ. ಬಳಿಕ ಹಣವನ್ನು ನಿರ್ಜನ ಪ್ರದೇಶದಲ್ಲಿರುವ ಪಾಳು ಮನೆಯೊಂದರಲ್ಲಿ ಬಚ್ಚಿಟ್ಟು ಎಸ್ಕೇಪ್ ಆಗಿದ್ದಾರೆ. ಚೆನ್ನೈ, ಕುಪ್ಪಂ, ಹೈದರಾಬಾದ್ ಕಡೆಗೆ ದರೋಡೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಸದ್ಯ 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 am, Sun, 30 November 25

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?