AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ

ಬೆಂಗಳೂರಿನಲ್ಲಿ ನಡೆದಿದ್ದ 7.11 ಕೋಟಿ ರೂ ದರೋಡೆ ಪ್ರಕರಣದಲ್ಲಿ ಪೊಲೀಸರು 7.01 ಕೋಟಿ (ಶೇ.98) ಹಣವನ್ನು ರಿಕವರಿ ಮಾಡಿದ್ದಾರೆ. ಈವರೆಗೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು ತಂಡದ ಕಾರ್ಯವನ್ನು ಶ್ಲಾಘಿಸಿದ್ದು, ಹೆಚ್ಚುವರಿ ಬಹುಮಾನ ಘೋಷಿಸಿದ್ದಾರೆ. ಇನ್ನು CMS ಸಿಬ್ಬಂದಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ.

ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ
ಬೆಂಗಳೂರು ದರೋಡೆ ಕೇಸ್​
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 25, 2025 | 3:09 PM

Share

ಬೆಂಗಳೂರು, ನವೆಂಬರ್​ 25: ನಗರದಲ್ಲಿ ಹಾಡಹಗಲೇ ನಡೆದಿದ್ದ 7 ಕೋಟಿ 11 ಲಕ್ಷ ರೂ. ದರೋಡೆ ಪ್ರಕರಣವನ್ನು (Robbery Case) ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ (seemanth kumar singh) ಗಂಭೀರವಾಗಿ ಪರಿಗಣಿಸಿದ್ದಾರೆ. ಈವರೆಗೆ 7.01 ಕೋಟಿ ರೂ. ರಿಕವರಿ ಆಗಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಈ ಮಧ್ಯೆ ಇತ್ತ ಸಿದ್ದಾಪುರ ಠಾಣೆ ಪೊಲೀಸರು CMS ವಾಹನ ಸಿಬ್ಬಂದಿ ವಿಚಾರಣೆ ವೇಳೆ ಮತ್ತಷ್ಟು ಸಂಗತಿಗಳು ಬೆಳಕಿಗೆ ಬಂದಿವೆ. ಅಷ್ಟು ದೊಡ್ಡ ದರೋಡೆ ನಡೆದಿದ್ದರೂ ಸಿಬ್ಬಂದಿಗೆ ಊಟವೇ ಮುಖ್ಯವಾಗಿತ್ತು. ಹೀಗಾಗಿ ಪೊಲೀಸರಿಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಮೊದಲ ಬಾರಿ ಶೇಕಡಾ 98.06ರಷ್ಟು ಹಣ ರಿಕವರಿ: ಆಯುಕ್ತ ಸೀಮಂತ್ ಕುಮಾರ್ ಸಿಂಗ್

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈವರೆಗೆ 7.01 ಕೋಟಿ ರಿಕವರಿ ಆಗಿದೆ. ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿ ಶೇಕಡಾ 98.06ರಷ್ಟು ಹಣ ರಿಕವರಿ ಆಗಿದೆ. ಈವರೆಗೆ 9 ಆರೋಪಿಗಳ ಬಂಧನ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್​: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?

ಚೆನ್ನೈ, ಆಂಧ್ರ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ರೂ. ಬಹುಮಾನ ನೀಡುತ್ತಿದ್ದೇವೆ.9 ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ದರೋಡೆ ನಡೆದಿದ್ದರೂ CMS ಸಿಬ್ಬಂದಿಗೆ ಊಟದ ಚಿಂತೆ

ನ.19ರಂದು CMS ವಾಹನ ಅಡ್ಡಗಟ್ಟಿ 7.11 ಕೋಟಿ ರೂ ದರೋಡೆ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಕಸ್ಟೋಡಿಯನ್, ಗನ್​ಮ್ಯಾನ್ ಕರೆದೊಯ್ದಿದ್ದರು. ಮಾರ್ಗಮಧ್ಯೆ ಕಸ್ಟೋಡಿಯನ್, ಗನ್​ಮ್ಯಾನ್ ಇಳಿಸಿ ಗ್ಯಾಂಗ್ ತೆರಳಿತ್ತು. ದರೋಡೆಕೋರರು ಇಳಿಸಿದ್ದ ಸ್ಥಳದಿಂದ ಠಾಣೆಗೆ ಕೂಗಳತೆ ದೂರದಲ್ಲಿದ್ದರು ಈ ಬಗ್ಗೆ CMS ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ದರೋಡೆ ನಡೆದು 2 ಗಂಟೆ ನಂತರ ಪೊಲೀಸರಿಗೆ ವಿಚಾರ ಗೊತ್ತಾಗಿತ್ತು. ಇಷ್ಟೊತ್ತು ಏನು ಮಾಡುತ್ತಿದ್ರಿ ಎಂದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಊಟದ ಸಮಯ ಆಗಿತ್ತು, ಆದ್ದರಿಂದ ಊಟಕ್ಕೆ ಹೋಗಿದ್ದೆವು ಎಂದಿದ್ದಾರೆ. ಹೀಗಾಗಿ ಸಿಎಂಎಸ್ ವಾಹನ ಸಿಬ್ಬಂದಿ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದರೋಡೆ: ಪಾಳು ಬಿದ್ದ ಮನೆಯಲ್ಲಿ ಕೋಟಿ ಕೋಟಿ ರೂ. ಬಚ್ಚಿಟ್ಟಿದ್ದ ಕ್ರಿಮಿನಲ್​ಗಳು!

ಸದ್ಯ ಸಿದ್ದಾಪುರ ಠಾಣೆಯಲ್ಲೇ ಪೊಲೀಸರಿಂದ ಸಿಎಂಎಸ್ ವಾಹನದ ಕಸ್ಟೋಡಿಯನ್, ಗನ್​ಮ್ಯಾನ್​ಗಳ ವಿಚಾರಣೆ ಮುಂದುವರಿದಿದೆ. ದರೋಡೆ ಪ್ರಕರಣದಲ್ಲಿ ಸಿಬ್ಬಂದಿ ಭಾಗಿಯಾದ ಬಗ್ಗೆ ಮಾಹಿತಿ ಇಲ್ಲ ಎಂದು  ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.