ಗೌತಮ್ ಒಬ್ಬ ಗುತ್ತಿಗೆದಾರನೇ ಅಲ್ಲ, ಅವನಲ್ಲಿ ಲೈಸನ್ಸ್ ಇರಲಿಲ್ಲ, ಅದೆಲ್ಲ ಬಿಜೆಪಿಯ ಸೃಷ್ಟಿ: ಮೃತ ಗೌತಮ್ ಸಂಬಂಧಿ
ಅವನಿಗೆ ಮದುವೆ ಮಾಡುವ ತಯಾರಿ ನಡೆಸಿದ್ದೆವು, 2-3 ಕನ್ಯೆಗಳನ್ನೂ ನೋಡಿದ್ದೆವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವನು ಡಿಪ್ರೆಶನ್ ಗೆ ಒಳಗಾಗಿದ್ದ ಮತ್ತು ಅಂತಿಮವಾಗಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದಾನೆ ಎಂದು ಗೌತಮ್ ಸಂಬಂಧಿ ಹೇಳಿದರು.
ಬೆಂಗಳೂರು: ನಗರದ ಗೌತಮ್ (Goutham) ಹೆಸರಿನ ಯುವಕ ಆತ್ಮಹತ್ಯೆ ಮೂಲಕ ಮೃತಪಟ್ಟಿದ್ದು ಅವರ ಸಾವಿಗೆ ರಾಜಕೀಯದ ಬಣ್ಣ ಬಳಿಯುವ ಯತ್ನ ವಿಫಲವಾಗಿದೆ. ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ದೊಡ್ಡಯ್ಯನವರ (corporator Doddaiah) ಮಗ ಗೌತಮ್ ಒಬ್ಬ ಗುತ್ತೇದಾರರಾಗಿದ್ದು ಬಿಲ್ ಗಳು ರಿಲೀಸ್ ಆಗದ ಕಾರಣ ಹತಾಷರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಬಿಜೆಪಿ ಟ್ವೀಟ್ ಮಾಡಿದೆ. ಆದರೆ, ಗೌತಮ್ ನ ಸಂಬಂಧಿಕರೊಬ್ಬರು (Goutham’s Kin) ಬೇರೆ ವರ್ಷನ್ ಮಾಧ್ಯಮಗಳಿಗೆ ತಿಳಿಸುತ್ತಿದ್ದಾರೆ. ಅಸಲಿಗೆ ಗೌತಮ್ ಗುತ್ತಿಗೆದಾರನೇ ಅಲ್ಲ, ಅವನಲ್ಲಿ ಲೈಸೆನ್ಸ್ ಇರಲಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಇದೆಲ್ಲ ಬಿಜೆಪಿಯ ಸೃಷ್ಟಿ, ಅವನಿಗೆ ಮದುವೆ ಮಾಡುವ ತಯಾರಿ ನಡೆಸಿದ್ದೆವು, 2-3 ಕನ್ಯೆಗಳನ್ನೂ ನೋಡಿದ್ದೆವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವನು ಡಿಪ್ರೆಶನ್ ಗೆ ಒಳಗಾಗಿದ್ದ ಮತ್ತು ಅಂತಿಮವಾಗಿ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 10, 2023 06:49 PM
Latest Videos