Loading video

ಅನಿರೀಕ್ಷಿತವಾಗಿ ಅಪಘಾತ ಮಾಡಿದ ಚಿಗರಿ ಬಸ್​​ ಚಾಲಕರಿಗೆ ಸನ್ಮಾನದ ಅವಮಾನ, ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ

Updated on: Jul 03, 2025 | 10:23 AM

ಇದ್ಯಾವ ಸೀಮೆ ನ್ಯಾಯ ಅಂತ ಡಿಪೋ ಮ್ಯಾನೇಜರ್ ಹೇಳಬೇಕು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂಥ ಉದ್ಧಟತನವನ್ನು ಸಹಿಸಲಾರರು ಅಂತ ಹುಬ್ಬಳ್ಳಿ ಜನ ಭಾವಿಸುತ್ತಿದ್ದಾರೆ. ನಿರಪರಾಧಿ ಮತ್ತು ಸಂಸ್ಥೆಗೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಚಾಲಕರಿಗೆ ಅಪಮಾನ ಮಾಡಿರುವ ಡಿಪೋ ಮ್ಯಾನೇಜರ್​​ಗೂ ಮೇಲಧಿಕಾರಿಗಳು ಅದೇ ರೀತಿ ಸನ್ಮಾನ ಮಾಡಿದರೆ ಹೇಗಿರುತ್ತದೆ?

ಹುಬ್ಬಳ್ಳಿ, ಜುಲೈ 3: ಅಪಘಾತಗಳು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾಗಿ ಯಾವ ವಾಹನನದ ಚಾಲಕನೂ ಅದನ್ನು ಮಾಡಲಾರ. ನಿನ್ನೆ ಹುಬ್ಬಳ್ಳಿ-ಧಾರವಾಡ (Hubballi-Dharwad) ನಡುವೆ ಸಂಚರಿಸುವ ಎರಡು ಚಿಗರಿ ಬಸ್​ಗಳ (ಹುಬ್ಬಳ್ಳಿ-ಧಾರವಾಡ ಬಸ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್) ನಡುವೆ ಅಪಘಾತ ನಡೆದಿದೆ. ಮುಂದೆ ಚಲಿಸುತ್ತಿದ್ದ ಬಸ್​ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಅದರ ಹಿಂದೆ ಚಲಿಸುತ್ತಿದ್ದ ಬಸ್ಸಿನ ಚಾಲಕ ತನ್ನ ವಾಹನವನ್ನು ಬ್ರೇಕ್ ಅದುಮಿ ನಿಲ್ಲಿಸುವ ಪ್ರಯತ್ನ ನಡೆಸಿದರೂ ಅದು ಮುಂದಿನ ಬಸ್ಸಿನ ಹಿಂಭಾಗಕ್ಕೆ ಗುದ್ದಿದೆ. ಪರಿಣಾಮ ದೃಶ್ಯಗಳಲ್ಲಿ ನೋಡಬಹುದು. ಇದೊಂದು ಕಡೆಗಣಿಸಬಹುದಾದ ಅಚಾತುರ್ಯ. ಆದರೆ ಡಿಪೋ ಮ್ಯಾನೇಜರ್ ಮತ್ತು ಇತರ ಅಧಿಕಾರಿಗಳು ಇಬ್ಬರು ಚಾಲಕರನ್ನು ಅಪಘಾತ ಮಾಡಿರುವುದಕ್ಕೆ ಸನ್ಮಾನ ಮಾಡಿ ಅವಮಾನ ಮಾಡಿದ್ದಾರೆ. ಕುಪಿತಗೊಂಡಿರುವ ಚಾಲಕರು ಡಿಪೋ ಮ್ಯಾನೇಜರ್ ವಿರುದ್ಧ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:  ದೊಡ್ಡಬಳ್ಳಾಪುರ: ಮಾಕಳಿ ಬಳಿ ಭೀಕರ ಅಪಘಾತ, ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ