Ramanagara: ಮಾಧ್ಯಮದವರ ಆಕ್ರೋಶಕ್ಕೀಡಾದರೂ ಸಚಿವ ಸಿ ಎನ್ ಅಶ್ವಥ್ ನಾರಾಯಣರಿಂದ ವಿಷಾದ ಮಾತ್ರ ವ್ಯಕ್ತವಾಗಲಿಲ್ಲ!
ಆದರೆ ತಮ್ಮ ಬೈಟ್ ಲೈವ್ ಹೋಗುತ್ತಿರುವ ಬಗ್ಗೆ ಅರಿವಿದ್ದ ಸಚಿವರು ತಮ್ಮಿಂದಾದ ಅಚಾತುರ್ಯವನ್ನು ತೋರ್ಪಡಿಸಿದೆ ಸಾವರಿಸಿಕೊಂಡು ಮಾತು ಮುಂದುವರಿಸಿದರು.
ರಾಮಮಗರ: ಜಿಲ್ಲೆಯ ಉಸ್ತುವಾರಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ( Dr CN Ashwath Narayan) ಅವರು ಇಂದು ಹಾರೋಹಳ್ಳಿ ತಾಲ್ಲೂಕು ಕಚೇರಿ (taluk office) ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ (media persons) ಕೋಪಕ್ಕೀಡಾದರು. ತರಾತುರಿಯಲ್ಲಿ ತಾಲ್ಲೂಕು ಕಚೇರಿ ಮಾಡಲು ಉದ್ಘಾಟನೆಗೆ ಬಂದ ಸಚಿವರು ಆಯೋಜಿತ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರಿಗೆ ತಿಳಿಸುವುದನ್ನೂ ಮರೆತು ಬಿಟ್ಟಿದ್ದರು. ಹಾಗಾಗೇ, ಮಾಧ್ಯಮದವರು ಯಾವ ಕಾರ್ಯಕ್ರಮ ಸರ್ ಇದು ಅಂತ ಕೇಳಿದಾಗ ಇಂಗು ತಿಂದ ಮಂಗನಂತಾದರು. ಆದರೆ ತಮ್ಮ ಬೈಟ್ ಲೈವ್ ಹೋಗುತ್ತಿರುವ ಬಗ್ಗೆ ಅರಿವಿದ್ದ ಸಚಿವರು ತಮ್ಮಿಂದಾದ ಅಚಾತುರ್ಯವನ್ನು ತೋರ್ಪಡಿಸಿದೆ ಸಾವರಿಸಿಕೊಂಡು ಮಾತು ಮುಂದುವರಿಸಿದರು. ಆದರೆ ಪತ್ರಕರ್ತರು ಅವರನ್ನು ಸುಮ್ಮನೆ ಬಿಡಲಿಲ್ಲ. ಪದೇಪದೆ ಆ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಸಚಿವರ ಬಾಯಿಂದ ಮಾತ್ರ ತಮ್ಮಿಂದ ಪ್ರಮಾದವಾಗಿದೆ ಅಂತ ಬರಲೇ ಇಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ