ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ: ರಾಜಕೀಯದ ಬಗ್ಗೆ ಭವಿಷ್ಯವಾಣಿ

Updated on: Oct 01, 2025 | 10:20 PM

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ರಾಜಕೀದ ಬಗ್ಗೆ ಗೊರವಯ್ಯ ಭವಿಷ್ಯವಾಣಿ ನುಡಿದ್ದಾರೆ. ರಾಜಕೀಯವಾಗಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರ ಹೊಮ್ಮುತ್ತಾರೆ ಎಂದು ನಾಗಪ್ಪ ಉರ್ಮಿ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.

ಹಾವೇರಿ, ಅಕ್ಟೋಬರ್​ 01: ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗಿಲತೇ ಪರಾಕ್ ಎಂದು ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಸ್ವಾಮಿ ಕಾರ್ಣಿಕ ನುಡಿದಿದ್ದಾರೆ. ನಾಡಿನಾದ್ಯಂತ ಪ್ರಸಕ್ತ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ರಾಜಕೀಯವಾಗಿ (Politics) ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರ ಹೊಮ್ಮುತ್ತಾರೆ ಎಂದು ನಾಗಪ್ಪ ಉರ್ಮಿ ಗೊರವಯ್ಯ ದೈವವಾಣಿ ನುಡಿದಿದ್ದಾರೆ. 9 ದಿನ ಉಪವಾಸ ವ್ರತ ಮಾಡಿ, 18 ಅಡಿ ಎತ್ತರದ ಬಿಲ್ಲನೇರಿ ಗೊರವಯ್ಯ ಸ್ವಾಮಿ ಕಾರ್ಣಿಕ ನುಡಿಯೋದು ಇಲ್ಲಿನ ವಿಶೇಷ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.