ವೈಕುಂಠ ಏಕಾದಶಿ: ಮದ್ದೂರಿನ ಉಗ್ರನರಸಿಂಹ ದೇವಸ್ಥಾನ ಭಕ್ತರ ದಂಡು, ದೇವರಿಗೆ ವಿಶೇಷ ಪೂಜೆ
ಗಮನಿಸಬೇಕಾದ ಅಂಶವೆಂದರೆ ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು, ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅದು ಸಾಧ್ಯವಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಜಾಸ್ತಿ ಇರುತ್ತದೆ. ಹಾಗಾಗಿ ದರ್ಶನ ಪಡೆಯುವ ಜನ ಮುಂದೆ ಸಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಮಾಧ್ಯಮದ ಕೆಮೆರಾಗಳನ್ನು ಕಂಡರೆ ಜನ ಬೇಗ ಮುಂದೆ ಸರಿಯುವುದಿಲ್ಲ.
ಮಂಡ್ಯ: ಇವತ್ತು ವೈಕುಂಠ ಏಕಾದಶಿ, ನಾಡಿನ ಜನ ಭಕ್ತಿಭಾವಗಳಿಂದ ವೆಂಕಟೇಶ್ವರನಿಗೆ, ಉಗ್ರ ನರಸಿಂಹನಿಗೆ ಪೂಜೆಗಳನ್ನು ಮಾಡುತ್ತಿದ್ದಾರೆ. ಜಿಲ್ಲೆಯ ಮದ್ದೂರುನಲ್ಲಿರುವ ಉಗ್ರನರಸಿಂಹನ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಉಗ್ರನರಸಿಂಹನಿಗೆ ಬೆಳಗಿನ ಜಾವದಿಂದಲೇ ಅಲಂಕರಿಸುವುದು ಶುರುವಾಗಿದೆಯೆಂದು ದೇವಸ್ಥಾನ ಮಂಡಳಿ ಹೇಳಿದೆ. ಭಕ್ತರು ಸಾಲುಸಾಲಾಗಿ ದೇವಸ್ಥಾನಕ್ಕೆ ಅಗಮಿಸಿ ನರಸಿಂಹನ ದರ್ಶನ ಪಡೆದು ಭಕ್ತಿಯಿಂದ ಕೈಮುಗಿಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Daily Horoscope: ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
Published on: Jan 10, 2025 11:57 AM