‘ಹೆಣ್ಣುಮಗು ಹುಟ್ಟೋಕೆ ನಾನು ಮದುವೆ ಆಗಲ್ಲ’; ಶ್ರೀಲೀಲಾಗೆ ನೇರವಾಗಿ ಹೇಳಿದ ಧನ್ವೀರ್​

| Updated By: ರಾಜೇಶ್ ದುಗ್ಗುಮನೆ

Updated on: Feb 04, 2022 | 7:07 PM

ಧನ್ವೀರ್​ ಗೌಡ ‘ಬೈ ಟು ಲವ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ.

ನಟನೆ ಮತ್ತು ಕಟ್ಟುಮಸ್ತಾದ ಬಾಡಿಯಿಂದಾಗಿ ಗಮನ ಸೆಳೆದವರು ನಟ ಧನ್ವೀರ್​ ಗೌಡ (Dhanveer Gowda). ‘ಬಜಾರ್​’ ಸಿನಿಮಾ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದರು. ಸಿನಿಮಾಗಳ ಆಯ್ಕೆಯಲ್ಲಿ ತಮ್ಮದೇ ಆದಂತಹ ಕೆಲವು ನಿಯಮಗಳನ್ನು ಪಾಲಿಸುತ್ತಿರುವ ಅವರು ಹೊಸ ಪ್ರಾಜೆಕ್ಟ್​ ಒಪ್ಪಿಕೊಂಡಿದ್ದಾರೆ. ಇದಕ್ಕೆ ‘ವಾಮನ’ ಎಂದು ಹೆಸರಿಡಲಾಗಿದೆ. ಸದ್ಯ ಧನ್ವೀರ್​ ಗೌಡ ‘ಬೈ ಟು ಲವ್​’ ಸಿನಿಮಾದ (By Two Love Movie) ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಧನ್ವೀರ್ ಹಾಗೂ ಚಿತ್ರದ ನಾಯಕಿ ಶ್ರೀಲೀಲಾ (Sree Leela) ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ತಾವು ಮದುವೆ ಆಗುವುದಿಲ್ಲ ಎನ್ನುವ ಮಾತನ್ನು ಧನ್ವೀರ್​ ಹೇಳಿದ್ದಾರೆ. ಅವರು ಮಾತನಾಡಿದ್ದು ವಿಡಿಯೋದಲ್ಲಿದೆ.  

ಇದನ್ನೂ ಓದಿ: ಟಾಲಿವುಡ್​ನಲ್ಲಿ ಹೆಚ್ಚುತ್ತಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ ಮಂದಣ್ಣಗೆ ಎದುರಾಗುತ್ತಾ ಟಫ್​ ಸ್ಪರ್ಧೆ

ಡಬ್ಬಿಂಗ್​ನಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡ ಶ್ರೀಲೀಲಾ; ವೈರಲ್​ ಆಯ್ತು ವಿಡಿಯೋ

Follow us on