ವಿಡಿಯೋ: ದರ್ಶನ್ ಕಾಣಲು ವಿಜಯಲಕ್ಷ್ಮಿ ಜೊತೆ ಬಂದ ಧನ್ವೀರ್

ವಿಡಿಯೋ: ದರ್ಶನ್ ಕಾಣಲು ವಿಜಯಲಕ್ಷ್ಮಿ ಜೊತೆ ಬಂದ ಧನ್ವೀರ್

ಮಂಜುನಾಥ ಸಿ.
|

Updated on:Sep 17, 2024 | 8:16 PM

Darshan Thoogudeepa: ದರ್ಶನ್ ತೂಗುದೀಪ ಅವರನ್ನು ಕಾಣಲು ಇಂದು ವಿಜಯಲಕ್ಷ್ಮಿ ದರ್ಶನ್ ಅವರೊಟ್ಟಿಗೆ ನಟ ಧನ್ವೀರ್ ಗೌಡ ಸಹ ಬಳ್ಳಾರಿ ಜೈಲಿಗೆ ಬಂದಿದ್ದರು. ಪರಪ್ಪನ ಅಗ್ರಹಾರ ಜೈಲಿಗೆ ಕೆಲವು ಬಾರಿ ಭೇಟಿ ನೀಡಿದ್ದ ಧನ್ವೀರ್ ಇದೇ ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು.

ಬಳ್ಳಾರಿ ಜೈಲಿನಲ್ಲಿ ದರ್ಶನ್ ದಿನ ದೂಡುತ್ತಿದ್ದು ಇಂದು ಅವರ ನ್ಯಾಯಾಂಗ ಬಂಧನ ಸೆಪ್ಟೆಂಬರ್ 30ರ ವರೆಗೆ ವಿಸ್ತರಣೆಯಾಗಿದೆ. ದರ್ಶನ್ ಅನ್ನು ಕಾಣಲು ಇಂದು ಅವರ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದರು. ಅವರ ಜೊತೆಗೆ ನಟ ಧನ್ವೀರ್ ಗೌಡ ಸಹ ಬಂದಿದ್ದರು. ಬಳ್ಳಾರಿ ಜೈಲಿಗೆ ದರ್ಶನ್ ಅನ್ನು ವರ್ಗಾವಣೆ ಮಾಡಿದ ಬಳಿಕ ದರ್ಶನ್​ರ ಮೊದಲ ರಕ್ತಸಂಬಂಧಿಗಳಿಗಷ್ಟೆ ಭೇಟಿಯಾಗಲು ಅವಕಾಶ ಇದೆ ಎಂದು ಜೈಲಧಿಕಾರಿಗಳು ಹೇಳಿದ್ದರು. ಆದರೆ ಇಂದು ನಟ ಧನ್ವೀರ್ ಸಹ ವಿಜಯಲಕ್ಷ್ಮಿ ಅವರೊಟ್ಟಿಗೆ ಬಂದು ದರ್ಶನ್ ಅವರನ್ನು ಭೇಟಿಯಾದರು. ವಕೀಲರು ಸಹ ಇಂದು ದರ್ಶನ್ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ದರ್ಶನ್​ರ ಜಾಮೀನು ಅರ್ಜಿಯ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಮಾಧ್ಯಮಗಳಿಗೆ ಕೆಟ್ಟ ಸಂಜ್ಞೆ ಮಾಡಿದ್ದ ದರ್ಶನ್ ಇಂದು ನಗುಮುಖದೊಟ್ಟಿಗೆ ಕಾಣಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 17, 2024 08:14 PM