ಧರ್ಮಸ್ಥಳ ಕೇಸ್: ಬಂಗ್ಲೆಗುಡ್ಡದಲ್ಲಿ ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ, 2 ದಿನದಲ್ಲಿ ಸಿಕ್ಕಿದ್ದೆಷ್ಟು? ಗೊತ್ತಾ?

Updated on: Sep 19, 2025 | 2:13 PM

ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ಬುಧವಾರದಿಂದ ಎಸ್ಐಟಿ ಶೋಧ ತೀವ್ರಗೊಳಿಸಿ  5 ತಲೆಬುರುಡೆ ಮತ್ತು ಕೆಲವು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇಂದು ಮತ್ತೆರಡು ತಲೆಬುರುಡೆ , ವಾಕಿಂಗ್ ಸ್ಟಿಕ್ ಸೇರಿ ಮತ್ತಷ್ಟು ಅಸ್ಥಿಪಂಜರಗಳು ಸಿಕ್ಕಿವೆ. SIT ಕಾರ್ಯಾಚರಣೆಯ ವೇಳೆ ಒಟ್ಟೂ 7 ತಲೆಬುರುಡೆ ಮತ್ತು 7 ಅಸ್ಥಿಪಂಜರಗಳು ದೊರೆತಿವೆ.

ಮಂಗಳೂರು, (ಸೆಪ್ಟೆಂಬರ್ 18): ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ಹೊಸ ತಿರುವು ಪಡೆದಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿರುವುದಾಗಿ ವಿಠಲ್ ಗೌಡ ಆರೋಪಿಸಿದ್ದ. ಈ ಸಂಬಂಧ ಬುಧವಾರದಿಂದ ಎಸ್ಐಟಿ ಶೋಧ ತೀವ್ರಗೊಳಿಸಿ  ಹಲವು ವಸ್ತುಗಳನ್ನು ಪತ್ತೆಮಾಡಿದೆ. ಬುಧವಾರ ನಡೆದ ಶೋಧದಲ್ಲಿ 5 ತಲೆಬುರುಡೆ ಮತ್ತು ಕೆಲವು ಅಸ್ಥಿಪಂಜರಗಳು ಪತ್ತೆಯಾಗಿತ್ತು. ಇಂದು ಸತತ 3 ಗಂಟೆಗಳ ಶೋಧದಲ್ಲಿ ಮತ್ತೆರಡು ತಲೆಬುರುಡೆ , ವಾಕಿಂಗ್ ಸ್ಟಿಕ್ ಸೇರಿ ಮತ್ತಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. 2 ದಿನದ ಕಾರ್ಯಾಚರಣೆ ಇಂದಿಗೆ ಮುಕ್ತಾಯಗೊಂಡಿದ್ದು,  ಶೋಧದಲ್ಲಿ ಒಟ್ಟು 7 ತಲೆಬುರುಡೆ ಮತ್ತು 7 ಅಸ್ಥಿಪಂಜರಗಳು ದೊರೆತಿವೆ. ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳನ್ನು SIT ಅಧಿಕಾರಿಗಳು ಪ್ಲ್ಯಾಸ್ಟಿಕ್ ಡಬ್ಬ, ಪೈಪ್​​ಗಳಲ್ಲಿ ತುಂಬಿಸಿಕೊಂಡು ಹೊರಟಿರುವ ದೃಶ್ಯಾವಳಿ ಇಲ್ಲಿದೆ.

 

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 18, 2025 05:37 PM
Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More