ಮಾರ್ಟಿನ್​ ಟ್ರೇಲರ್​ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ನೇರವಾಗಿ ಉತ್ತರ ನೀಡಿದ ಧ್ರುವ ಸರ್ಜಾ

Updated on: Oct 02, 2024 | 7:16 PM

ಧ್ರುವ ಸರ್ಜಾ ಅಭಿಮಾನಿಗಳು ‘ಮಾರ್ಟಿನ್​’ ಟ್ರೇಲರ್​ ನೋಡಿ ಇಷ್ಟಪಟ್ಟಿದ್ದಾರೆ. ಆದರೆ ಟ್ರೇಲರ್​ನ ಕೊನೆಯಲ್ಲಿ ಇರುವ ಒಂದು ಡೈಲಾಗ್​ ಕೆಲವರಿಗೆ ಸರಿ ಎನಿಸಿಲ್ಲ. ಆ ಬಗ್ಗೆ ಎದುರಾದ ಪ್ರಶ್ನೆಗೆ ಧ್ರುವ ಸರ್ಜಾ ಅವರು ಉತ್ತರ ನೀಡಿದ್ದಾರೆ. ಅಕ್ಟೋಬರ್​ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಆ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್​ 2) ಸುದ್ದಿಗೋಷ್ಠಿ ನಡೆಸಲಾಯಿತು.

‘ಡೋಂಟ್​ ಟೀಚ್​ ಫಾದರ್​, ಹೌ ಟು ಫ..’ ಎಂಬ ಡೈಲಾಗ್​ನೊಂದಿಗೆ ‘ಮಾರ್ಟಿನ್​’ ಟ್ರೇಲರ್​ ಕೊನೆಯಾಗುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಧ್ರುವ ಸರ್ಜಾ ಅವರಿಗೆ ಪ್ರಶ್ನೆ ಎದುರಾಯಿತು. ‘ಡೋಂಟ್ ಟೀಚ್​ ಫಾದರ್​ ಹೌ ಟು ಫೈಟ್​ ಎಂಬುದು ಆ ಡೈಲಾಗ್​ನ ಪೂರ್ಣ ರೂಪ. ಸೋಶಿಯಲ್​ ಮೀಡಿಯಾದಲ್ಲಿ ಏನಿದೆ ಎಂಬುದನ್ನು ಬಿಟ್ಟುಬಿಡಿ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಈ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡಿದ್ದಾರೆ. ಉದಯ್​ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More