‘ನಮ್ಮ ಅಣ್ಣನ ಸಿನಿಮಾ ನೋಡಿ ಅಂತ ಎಲ್ಲ ತಾಯಂದಿರಲ್ಲಿ ಮನವಿ ಮಾಡ್ತೀನಿ’: ಧ್ರುವ ಸರ್ಜಾ

Updated on: Oct 02, 2023 | 10:20 PM

‘ಪ್ರತಿ ಕ್ಷಣವೂ ಅಣ್ಣನನ್ನು ನಾನು ಮಿಸ್​ ಮಾಡಿಕೊಳ್ಳುತ್ತೇನೆ. ಕಳೆದ ಮೂರು ವರ್ಷದಿಂದ ನಾನು ಜನ್ಮದಿನ ಆಚರಿಸಿಕೊಂಡಿಲ್ಲ. ಎಷ್ಟೇ ಖುಷಿ ಸಿಕ್ಕರೂ ಅಣ್ಣ ಇಲ್ಲದೇ ಅಪೂರ್ಣ ಎನಿಸುತ್ತದೆ. ಈ ವರ್ಷದ ನನ್ನ ಬರ್ತ್​ಡೇಗೆ ಸಿಗುತ್ತಿರುವ ಬೆಸ್ಟ್​ ಉಡುಗೊರೆ ಎಂದರೆ ಅದು ರಾಜಮಾರ್ತಾಂಡ ಸಿನಿಮಾ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರು ಅಭಿನಯಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ಈಗ ಬಿಡುಗಡೆ ಆಗುತ್ತಿದೆ. ಅಕ್ಟೋಬರ್​ 6ರಂದು ಈ ಚಿತ್ರ ತೆರೆಕಾಣಲಿದೆ. ಆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಲಾಗಿದ್ದು, ಅದರಲ್ಲಿ ಧ್ರುವ ಸರ್ಜಾ ಭಾಗಿ ಆಗಿದ್ದಾರೆ. ಚಿರು ನಿಧನದ ಬಳಿಕ ಈ ಸಿನಿಮಾಗೆ ಧ್ರುವ ಅವರೇ ಡಬ್ಬಿಂಗ್​ ಮಾಡಿಕೊಟ್ಟರು. ಈಗ ‘ರಾಜಮಾರ್ತಾಂಡ’ (Rajamarthanda) ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಪ್ರೇಕ್ಷಕರ ಎದುರು ಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಪ್ರೇಕ್ಷಕರಿಗೂ ಧ್ರುವ ಸರ್ಜಾ ಒಂದು ಮನವಿ ಮಾಡಿಕೊಂಡಿದ್ದಾರೆ. ‘ಎಲ್ಲ ಮಕ್ಕಳು ಮತ್ತು ತಾಯಂದಿರು ದಯವಿಟ್ಟು ಎರಡು ಗಂಟೆ ಬಿಡುವು ಮಾಡಿಕೊಂಡು ನಮ್ಮ ಅಣ್ಣನ ಸಿನಿಮಾ ನೋಡಿ’ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ. ಅಣ್ಣನ ಪಾತ್ರಕ್ಕೆ ಧ್ವನಿ ನೀಡಿದ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಈ ಸಿನಿಮಾಗೆ ರಾಮ್​ ನಾರಾಯಣ್​ ನಿರ್ದೇಶನ ಮಾಡಿದ್ದು, ಶಿವಕುಮಾರ್​ ನಿರ್ಮಾಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More