ಲವ್ ಫೇಲ್ಯೂರ್ ಆಯ್ತು, ಮದುವೆ ಆದೆ ಡೈವರ್ಸ್ ಆಗ್ತಿದೆ ಇದೆಲ್ಲ ಬೇಕಿತ್ತ ನಂಗೆ: ಗುರು ಪ್ರಸಾದ್

Updated on: Jun 18, 2023 | 10:30 PM

Guru Prasad: ನಿರ್ದೇಶಕ ಗುರು ಪ್ರಸಾದ್ ಅಚಾನಕ್ಕಾಗಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲ ಬೇಕಿತ್ತ ಎಂದು ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ.

ನಿರ್ದೇಶಕ, ನಟ ಗುರುಪ್ರಸಾದ್ (Guruprasad) ಇದೆಲ್ಲ ಬೇಕಿತ್ತ ನಂಗೆ ಎಂದಿದ್ದಾರೆ! ಮೊದಲ ಲವ್ ಫೆಲ್ಯೂರ್ ಆಯ್ತು, ಈಗ ಡೈವರ್ಸ್ ಆಗ್ತಾ ಇದೆ. ಇಷ್ಟೆಲ್ಲ ಆದ ಮೇಲೆ ಸುಮ್ಮನಿರದೆ ಮತ್ತೆ ಮದುವೆ ಆದೆ ಎರಡು ವರ್ಷದ ಮಗನೂ ಇದ್ದಾನೆ ಇದೆಲ್ಲ ನನಗೆ ಬೇಕಿತ್ತ ಎಂದಿದ್ದಾರೆ. ಅಂದಹಾಗೆ ಹೀಗೆ ತಮ್ಮ ಖಾಸಗಿ ಬದುಕನ್ನು ಅವರು ಬಿಚ್ಚಿಟ್ಟಿರುವುದು ರಾಜು ಜೇಮ್ಸ್ ಬಾಂಡ್ ಸಿನಿಮಾದ ಹಾಡಿನ ಪ್ರಚಾರಕ್ಕೆ. ಬೇಕಿತ್ತ ಬೇಕಿತ್ತ ಹೆಸರಿನ ಹಾಡನ್ನು ಈ ಸಿನಿಮಾಕ್ಕಾಗಿ ಮಾಡಿದ್ದು ಹಾಡು ಬಿಡುಗಡೆ ಆಗಿದ್ದು ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More