Mata Guruprasad: ಚೆಕ್​ ಬೌನ್ಸ್​ ಪ್ರಕರಣ: ಅರೆಸ್ಟ್​ ಆದ ಕೆಲವೇ ಗಂಟೆಗಳಲ್ಲಿ ಗುರುಪ್ರಸಾದ್​​ಗೆ ಸಿಕ್ತು ಜಾಮೀನು

Guruprasad | Cheque Bounce Case: ಖ್ಯಾತ ನಿರ್ದೇಶಕ ಗುರುಪ್ರಸಾದ್​ ಅವರಿಗೆ ಜಾಮೀನು ನೀಡಲಾಗಿದೆ. ಆ ಮೂಲಕ ಚೆಕ್​ ಬೌನ್ಸ್​ ಪ್ರಕರಣದಲ್ಲಿ ಅವರಿಗೆ ತಾತ್ಕಾಲಿಕ ರಿಲೀಫ್​​ ಸಿಕ್ಕಂತಾಗಿದೆ.

Mata Guruprasad: ಚೆಕ್​ ಬೌನ್ಸ್​ ಪ್ರಕರಣ: ಅರೆಸ್ಟ್​ ಆದ ಕೆಲವೇ ಗಂಟೆಗಳಲ್ಲಿ ಗುರುಪ್ರಸಾದ್​​ಗೆ ಸಿಕ್ತು ಜಾಮೀನು
ಮಠ ಗುರುಪ್ರಸಾದ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 13, 2023 | 8:58 PM

ಸ್ಯಾಂಡಲ್​ವುಡ್​ ನಿರ್ದೇಶಕ ‘ಮಠ’ ಗುರುಪ್ರಸಾದ್​ (Director Guruprasad) ಅವರು ಚೆಕ್​ ಬೌನ್ಸ್​ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಶ್ರೀನಿವಾಸ್​ ಎಂಬುವವರಿಂದ ಪಡೆದುಕೊಂಡ ಹಣವನ್ನು ವಾಪಸ್​ ನೀಡದೇ ಸತಾಯಿಸಿದ್ದ ಅವರನ್ನು ಇಂದು (ಜ.13) ಬೆಂಗಳೂರಿನ ಗಿರಿ ನಗರ ಪೊಲೀಸರು ಬಂಧಿಸಿದ್ದರು. ಆದರೆ ಅರೆಸ್ಟ್​ ಆದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು (Bail) ಸಿಕ್ಕಿದೆ. ಬಂಧನವಾದ ಬಳಿಕ ಗುರುಪ್ರಸಾದ್​ ಅವರನ್ನು ಮೆಡಿಕಲ್​ ಚೆಕಪ್​ಗೆ ಕರೆದುಕೊಂಡು ಹೋಗಲಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಅವರು, ‘ನಾನೇನೂ ತಪ್ಪು ಮಾಡಿಲ್ಲ. ಚೆಕ್​ ಬೌನ್ಸ್​ (Cheque Bounce Case) ಆಗಿದೆ ಅಷ್ಟೇ. ಸದ್ಯದಲ್ಲೇ ಸುದ್ದಿಗೋಷ್ಠಿ ಕರೆದು ಮಾತನಾಡುತ್ತೇನೆ’ ಎಂದಿದ್ದರು. ಈಗ ಅವರಿಗೆ ಜಾಮೀನು ಸಿಕ್ಕಿರುವುದರಿಂದ ಈ ಕೇಸ್​ನಲ್ಲಿ ತಾತ್ಕಾಲಿಕವಾಗಿ ರಿಲೀಫ್​ ಸಿಕ್ಕಂತೆ ಆಗಿದೆ.

30 ಲಕ್ಷ ರೂಪಾಯಿ ಪಡೆದಿದ್ದ ಗುರುಪ್ರಸಾದ್​:

ನಿರ್ದೇಶಕ ಗುರುಪ್ರಸಾದ್​ ಮೇಲೆ ಶ್ರೀನಿವಾಸ್​ ಎಂಬುವವರು ಈ ಆರೋಪ ಮಾಡಿದ್ದಾರೆ. ‘2015ರಲ್ಲಿ ಅಭಿಮಾನಿಯಾಗಿ ಅವರಿಗೆ ನಾನು ಪರಿಚಯ ಆಗಿದ್ದು. 2016ರಲ್ಲಿ ಮನೆ ಹರಾಜು ಆಗ್ತಿತ್ತು. ಆಗ ಅವರಿಗೆ ಸಾಲ ಅಂತ 30 ಲಕ್ಷ ರೂಪಾಯಿ ಕೊಟ್ಟಿದ್ದೆ. ಆದರೆ ದುಡ್ಡು ವಾಪಸ್​ ಕೇಳಿದಾಗ ಕೆಟ್ಟ ರೀತಿಯಲ್ಲಿ ವರ್ತಿಸಿದರು. ಕಳೆದ ವರ್ಷ ಆಗಸ್ಟ್​ನಲ್ಲಿ ಈ ಕೇಸ್​ ಹಾಕಿದೆ’ ಎಂದಿದ್ದಾರೆ ಶ್ರೀನಿವಾಸ್​.

‘ಕೋರ್ಟ್​ ಮೂಲಕ ನ್ಯಾಯ ಕೇಳುತ್ತಿದ್ದೇನೆ. ಈಗಲೂ ದುಡ್ಡು ಕೊಟ್ಟರೆ ಅವರ ಕಾಲಿಗೆ ಬಿದ್ದು ಕೇಸ್​ ವಾಪಸ್​ ಪಡೆಯುತ್ತೇನೆ. ಚೆಕ್​ ಬೌನ್ಸ್​ ಕೇಸ್​ ಹಾಕಿದ್ಮೇಲೆ 2ನೇ ಹೆಂಡತಿಯಿಂದ ನನ್ನ ವಿರುದ್ಧ ಅನುಚಿತ ವರ್ತನೆ ಅಂತ ದೂರು ದಾಖಲು ಮಾಡಿದ್ರು’ ಎಂದು ಶ್ರೀನಿವಾಸ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ
Image
Guruprasad Arrest: ಚೆಕ್​ಬೌನ್ಸ್ ಪ್ರಕರಣ; ‘ಮಠ’ ಖ್ಯಾತಿಯ ಗುರುಪ್ರಸಾದ್ ಅರೆಸ್ಟ್
Image
ರಂಗನಾಯಕ ಸಿನಿಮಾ ಶುರುವಾಗಿದ್ದು ಹೇಗೆ? ಅಚ್ಚರಿಯ ವಿಚಾರ ಬಿಚ್ಚಿಟ್ಟ ನಿರ್ದೇಶಕ ಗುರುಪ್ರಸಾದ್​
Image
‘ಕರಿಯ 2’ ನಿರ್ದೇಶಕರ ಜೊತೆ ‘ಬಾಡಿ ಗಾಡ್’ ಕಥೆ ಹೇಳಲು ಬಂದ ‘ಮಠ’ ಗುರುಪ್ರಸಾದ್​​
Image
‘ಮೋದಿ ಮುಖ ನೋಡ್ಕೊಂಡು ವೋಟ್​ ಹಾಕಿದ್ವಿ, ನಮಗೆ ಬೆಲೆ ಇಲ್ವಾ’; ಸಿಎಂ ವಿರುದ್ಧ ಗುರುಪ್ರಸಾದ್​ ಗರಂ

ಇದನ್ನೂ ಓದಿ: ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್​ ಬಹಿರಂಗ ಡೆತ್​ ನೋಟ್​​

2006ರಲ್ಲಿ ತೆರೆಗೆ ಬಂದ ‘ಮಠ’ ಸಿನಿಮಾಗೆ ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾ ಅದು. ಈ ಚಿತ್ರದಲ್ಲಿ ಜಗ್ಗೇಶ್ ಮುಖ್ಯ ಪಾತ್ರ ಮಾಡಿದ್ದರು. ಆ ಸಿನಿಮಾ ಯಶಸ್ಸು ಕಂಡಿತು. ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್​​ನಲ್ಲಿ ಮೂಡಿಬಂದ 2009ರ ‘ಎದ್ದೇಳು ಮಂಜುನಾಥ’ ಸಿನಿಮಾ ಕೂಡ ಯಶಸ್ಸು ಕಂಡಿತು. 2013ರಲ್ಲಿ ‘ಡೈರೆಕ್ಟರ್​ ಸ್ಪೆಷಲ್​’ ನಿರ್ದೇಶನ ಮಾಡಿದರು. ಇನ್ನೂ ಕೆಲವು ಚಿತ್ರಗಳಿಗೆ ಅವರು ಆ್ಯಕ್ಷನ್​ಕಟ್ ಹೇಳಿದ್ದಾರೆ.

ಇದನ್ನೂ ಓದಿ: ರಂಗನಾಯಕ ಸಿನಿಮಾ ಶುರುವಾಗಿದ್ದು ಹೇಗೆ? ಅಚ್ಚರಿಯ ವಿಚಾರ ಬಿಚ್ಚಿಟ್ಟ ನಿರ್ದೇಶಕ ಗುರುಪ್ರಸಾದ್​

ಗುರುಪ್ರಸಾದ್​ ಅವರ ನಿರ್ದೇಶನದಲ್ಲಿ ‘ರಂಗನಾಯಕ’ ಸಿನಿಮಾ ಮೂಡಿಬರುತ್ತಿದೆ. ಆ ಸಿನಿಮಾದ ನಿರ್ಮಾಪಕ ವಿಖ್ಯಾತ ಅವರು ಗುರುಪ್ರಸಾದ್​ಗೆ ಜಾಮೀನು ಕೊಡಿಸಿದ್ದಾರೆ ಎನ್ನಲಾಗಿದೆ. ‘ರಂಗನಾಯಕ’ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಗುರುಪ್ರಸಾದ್​ ಅವರ ಮುಂದಿನ ನಡೆ ಮೇಲೆ ಕೌತುಕ ಮೂಡಿದೆ. ಅವರು ನಡೆಸಲಿರುವ ಸುದ್ದಿಗೋಷ್ಠಿಗಾಗಿ ನಿರೀಕ್ಷಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ
ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ
ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್