Mangli: ಮೊದಲ ಬಾರಿಗೆ ಮಂಗ್ಲಿ ಕಂಠದಲ್ಲಿ ತುಳು ಹಾಡು; ‘ಬಿರ್ದ್‌ದ ಕಂಬಳ’ ಚಿತ್ರಕ್ಕೆ ಸಾಂಗ್​​ ರೆಕಾರ್ಡಿಂಗ್​

Singer Mangli | Tulu Cinema: ‘ಬಿರ್ದ್‌ದ ಕಂಬಳ’ ಸಿನಿಮಾದಲ್ಲಿ ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆಯಾದ ಕಂಬಳದ ಕುರಿತ ಕಥೆ ಇರಲಿದೆ. ಈ ಚಿತ್ರದ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ.

Mangli: ಮೊದಲ ಬಾರಿಗೆ ಮಂಗ್ಲಿ ಕಂಠದಲ್ಲಿ ತುಳು ಹಾಡು; ‘ಬಿರ್ದ್‌ದ ಕಂಬಳ’ ಚಿತ್ರಕ್ಕೆ ಸಾಂಗ್​​ ರೆಕಾರ್ಡಿಂಗ್​
‘ಬಿರ್ದ್​ದ ಕಂಬಳ’ ಸಿನಿಮಾ ಟೀಮ್​ ಜೊತೆ ಮಂಗ್ಲಿ
Follow us
| Updated By: ಮದನ್​ ಕುಮಾರ್​

Updated on: Jan 13, 2023 | 5:21 PM

ತೆಲುಗು ಮೂಲದ ಗಾಯಕಿ ಮಂಗ್ಲಿ (Singer Mangli) ಅವರಿಗೆ ಕರುನಾಡಿನಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಖತ್​ ಬೇಡಿಕೆ ಸೃಷ್ಟಿ ಆಗಿದೆ. ಕನ್ನಡದ ಅನೇಕ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ. ಅಷ್ಟೇ ಅಲ್ಲದೇ ಅವರು ತುಳು ಮಂದಿಯನ್ನೂ ರಂಜಿಸೋಕೆ ಸಜ್ಜಾಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಮಂಗ್ಲಿ ಅವರು ತುಳು ಹಾಡಿಗೆ (Mangli Tulu Song) ಧ್ವನಿ ನೀಡಿದ್ದಾರೆ. ಈ ಕುರಿತು ಸುದ್ದಿ ಹೊರಬಿದ್ದಿದೆ. ಎ.ಆರ್. ಪ್ರೊಡಕ್ಷನ್ಸ್ ಬ್ಯಾನರ್‌ ಮೂಲಕ ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿರುವ ‘ಬಿರ್ದ್‌ದ ಕಂಬಳ’ ಚಿತ್ರದಲ್ಲಿ ಒಂದು ಹಾಡಿಗೆ ಮಂಗ್ಲಿ ಧ್ವನಿ ನೀಡಿದ್ದಾರೆ. ಕನ್ನಡದಲ್ಲೂ ‘ವೀರ ಕಂಬಳ’ (Veera Kambala) ಶೀರ್ಷಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಮಂಗ್ಲಿ ಅವರು ಹಾಡಿದ್ದಾರೆ.

ಮಂಗ್ಲಿ ಅವರ ಕಂಠದಲ್ಲಿ ಮೂಡಿಬರುತ್ತಿರುವ ಈ ಹಾಡಿಗೆ ತುಳುವಿನಲ್ಲಿ ಕೆ.ಕೆ. ಪೇಜಾವರ ಹಾಗೂ ಕನ್ನಡದಲ್ಲಿ ರಘು ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಕದ್ರಿ ಮಣಿಕಾಂತ್ ಅವರು ಸಂಗೀತ ನೀಡಿದ್ದಾರೆ. ಈ ಮೊದಲು ಮಂಗ್ಲಿ ಹಾಡಿದ ‘ಕಣ್ಣೆ ಅದಿರಿಂದಿ..’ ಹಾಡು ಸೂಪರ್​ ಹಿಟ್​ ಆಗಿತ್ತು. ನಂತರ ಅವರು ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ..’ ಗೀತೆಗೆ ಧ್ವನಿ ನೀಡುವ ಮೂಲಕ ಕನ್ನಡಿಗರ ಮನ ಗೆದ್ದರು. ಬಳಿಕ ‘ಪುಷ್ಪ’ ಸಿನಿಮಾದ ಕನ್ನಡ ವರ್ಷನ್​ನಲ್ಲಿ ಐಟಂ ಹಾಡನ್ನು ಮಂಗ್ಲಿ ಹಾಡಿದ್ದರು. ಆ ಎಲ್ಲ ಸಾಂಗ್ಸ್​ ಸೂಪರ್​ ಹಿಟ್​ ಆಗಿವೆ. ಈಗ ಅವರು ತುಳುವಿನಲ್ಲೂ ಮಿಂಚಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: Dr D Veerendra Heggade: ಬಹುನಿರೀಕ್ಷಿತ ‘ವೀರ ಕಂಬಳ’ ಚಿತ್ರದಲ್ಲಿ ನಟಿಸಿದ ಡಾ. ವೀರೇಂದ್ರ ಹೆಗ್ಗಡೆ; ಪಾತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ
Image
Mangli: ಮೈಸೂರಿಗೆ ಬಂದು ‘ಕನ್ನಡ ನನಗೆ ಎರಡನೇ ಮನೆ’ ಎಂದು ತೆಲುಗಿನಲ್ಲೇ ಹೇಳಿದ ಗಾಯಕಿ ಮಂಗ್ಲಿ
Image
Singer Mangli: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತೆಲುಗು ಗಾಯಕಿ ಮಂಗ್ಲಿ ‘ವಂದೇ ಮಾತರಂ’ ಘೋಷ
Image
‘ಪುಷ್ಪ’ ಸಿನಿಮಾದ ಐಟಂ ಸಾಂಗ್​ ಹಾಡಿದ್ದು ‘ಮಂಗ್ಲಿ’ ಸಹೋದರಿ; ಹಿಟ್​ ಆಯ್ತು ಹಾಡು
Image
Singer Mangli: ‘ಏಕ್​ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್​ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ

‘ವೀರ ಕಂಬಳ’ ಸಿನಿಮಾದಲ್ಲಿ ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆಯಾದ ಕಂಬಳದ ಕುರಿತ ಕಥೆ ಇರಲಿದೆ. ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ಮಾಡಲಾಗಿದೆ. ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾದ ಶ್ರೀನಿವಾಸ ಗೌಡ, ‘ಕಾಂತಾರ’ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ, ಆದಿತ್ಯ ಮುಂತಾದವರು ನಟಿಸಿದ್ದಾರೆ.

ಈ ಚಿತ್ರಕ್ಕೆ ಕೊನೇ ಹಂತದ ಶೂಟಿಂಗ್​ ಮಾಡಲಾಗುತ್ತಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ