Chikmagalur: ಮೂಡಿಗೆರೆಯಲ್ಲಿ ಎಮ್ ಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ, ಮಾಜಿ ಶಾಸಕನಿಗೆ ತ್ರಿಶಂಕು ಸ್ಥಿತಿ!
ಕಾರ್ಯಕರ್ತರ ತಮ್ಮೊಂದಿಗಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡಿರುವ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕದ ತಟ್ಟಿದ್ದಾರೆ. ಆದರೆ ಅವೆರಡೂ ಪಕ್ಷದ ನಾಯಕರು ಅವರಿಗೆ ಕ್ಯಾರೆ ಅಂದಿಲ್ಲ.
ಚಿಕ್ಕಮಗಳೂರು: ಜಲ್ಲೆಯ ಮೂಡಿಗೆರೆ (Mudigere) ತಾಲ್ಲೂಕು ಬಿಜೆಪಿ ಘಟಕದಲ್ಲಿ ಒಡಕುಂಟಾಗಿರುವ ಬಗ್ಗೆ ನಾವು ಬಹಳ ಹಿಂದೆಯೇ ವರದಿ ಮಾಡಿದ್ದೆವು. ಅದೀಗ ಬಹಿರಂಗಗೊಳ್ಳುತ್ತಿದೆ. ಮಾಜಿ ಶಾಸಕ ಎಮ್ ಪಿ ಕುಮಾರಸ್ವಾಮಿ (MP Kumaraswamy) ಸ್ಥಳದ ಕಾರ್ಯಕರ್ತರಿಗೆ ಬೇಡದ ವ್ಯಕ್ತಿಯಾಗಿದ್ದಾರೆ. ಅವರಿಂದ ಕಾರ್ಯಕರ್ತರು ಎಷ್ಟು ಬೇಸತ್ತಿದ್ದಾರೆಂದರೆ, ವಿಜಯ ಸಂಕಲ್ಪ ಯಾತ್ರೆ ಭಾಗವಾಗಿ ಜಿಲ್ಲೆಗೆ ಆಗಮಿಸಲಿರುವ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಕುಮಾರಸ್ವಾಮಿಗೆ ಮೂಡಿಗೆರೆಯಿಂದ ಟಿಕೆಟ್ ನೀಡಕೂಡದೆಂದು ಮನವಿ ಸಲ್ಲಿಸಿದ್ದಾರೆ. ಕಾರ್ಯಕರ್ತರ ತಮ್ಮೊಂದಿಗಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡಿರುವ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕದ ತಟ್ಟಿದ್ದಾರೆ. ಆದರೆ ಅವೆರಡೂ ಪಕ್ಷದ ನಾಯಕರು ಅವರಿಗೆ ಕ್ಯಾರೆ ಅಂದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 16, 2023 10:17 AM
Latest Videos