Rohini Sindhuri Vs D Roopa: ನಿಮ್ಮ ಜಗಳದ ನಡುವೆ ಸತ್ತಿರುವ ನನ್ನ ಮಗನನ್ನು ಎಳೆತರಬೇಡಿ: ಗೌರಮ್ಮ, ದಿವಂಗತ ಡಿಕೆ ರವಿ ತಾಯಿ

|

Updated on: Feb 20, 2023 | 12:57 PM

ಮಗ ಸತ್ತಾಗ ರೂಪಾ ಆಗಲೀ, ರೋಹಿಣಿಯಾಗಲೀ ತನ್ನನ್ನು ಮಾತಾಡಿಸಲು ಬಂದಿಲ್ಲ, ಹಾಗಾಗಿ ಅವರಿಗೆ ತಮ್ಮ ಮಗನ ಹೆಸರು ಉಲ್ಲೇಖಿಸುವುದಕ್ಕೆ ಅಧಿಕಾರವಿಲ್ಲ, ಎಂದು ಗೌರಮ್ಮ ಹೇಳಿದ್ದಾರೆ.

ರಾಮನಗರ: ಉಚ್ಚಸ್ತರದ ಅಧಿಕಾರಿಗಳಾಗಿರುವ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಡಿ ರೂಪಾ ಮೌದ್ಗೀಲ್ (D Roopa Moudgil) ನಡುವೆ ಶುರುವಾಗಿರುವ ಕಾದಾಟ ಅವರಿಬ್ಬರಿಗೆ ಮಾತ್ರ ಸೀಮಿತವಾಗಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಎಂಟು ವರ್ಷಗಳ ಹಿಂದೆ ಗತಿಸಿದ ಐಎಎಸ್ ಅಧಿಕಾರಿ ಡಿಕೆ ರವಿಯವರ (DK Ravi) ಹೆಸರು ತೇಲಿ ಬರುತ್ತಿರುವುದು ಅವರ ಕುಟುಂಬದ ಸದಸ್ಯರನ್ನು ಕೆರಳಿಸಿದೆ. ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದಲ್ಲಿ ಟಿವಿ ಪ್ರತಿನಿಧಿಯೊಂದಿಗೆ ಮಾತಾಡಿದ ರವಿ ಅವರ ತಾಯಿ ಗೌರಮ್ಮ (Gouramma) ಅವರು, ರೂಪಾ ಅವರನ್ನು ವಿಶೇಷ ತರಾಟೆಗೆ ತೆಗೆದುಕೊಂಡಿದ್ದಾರೆ. ಮಗ ಸತ್ತಾಗ ರೂಪಾ ಆಗಲೀ, ರೋಹಿಣಿಯಾಗಲೀ ತನ್ನನ್ನು ಮಾತಾಡಿಸಲು ಬಂದಿಲ್ಲ, ಹಾಗಾಗಿ ಅವರಿಗೆ ತಮ್ಮ ಮಗನ ಹೆಸರು ಉಲ್ಲೇಖಿಸುವುದಕ್ಕೆ ಅಧಿಕಾರವಿಲ್ಲ, ಎಂದು ಗೌರಮ್ಮ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Feb 20, 2023 12:52 PM