IAS Vs IPS | ಅಸಲಿಗೆ ನನ್ನ ಪತ್ನಿಯ ವಿಷಯದಲ್ಲಿ ಮಾತಾಡಲು ಡಿ ರೂಪಾ ಯಾರು? ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಪತಿ
ಡಿ ರೂಪಾ ಅವರು ರೋಹಿಣಿಯವರನ್ನು ಪಶ್ನಿಸುವುದಕ್ಕೆ ಅಸಲಿಗೆ ಯಾರು? ತನ್ನ ಪತ್ನಿಯ ವಿಷಯದಲ್ಲಿ ಅವರು ಮೂಗು ತೂರಿಸುತ್ತಿರುವುದು ಯಾಕೆ ಅಂತ ರೆಡ್ಡಿ ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಪಿಎಸ್ ಮತ್ತು ಐಎಎಸ್ ಅಧಿಕಾರಿಣಿಯರ ನಡುವೆ ಅನಾವಶ್ಯಕ ಕಾದಾಟ ಶುರುವಾಗಿದೆ. ರೋಹಿಣಿ ಸಿಂಧೂರಿ (Rohini Sindhuri) ಮತ್ತು ಡಿ ರೂಪಾ (D Roopa) ಅವರ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳಿವೆ. ಅದನ್ನೆಲ್ಲ ಬಿಟ್ಟು ಹೀಗೆ ಸಾರ್ವಜನಿಕವಾಗಿ ಕೋಳಿ ಜಗಳಕ್ಕಿಳಿದಿರುವುದು ಕನ್ನಡಿಗರಿಗೆ ಹಾಸ್ಯಾಸ್ಪದವೆನಿಸುತ್ತಿದೆ. ವಿಷಯಕ್ಕೆ ಸಂಬಂಧಿಸಿದಂತೆ ರೋಹಿಣಿ ಪತಿ ಸುಧೀರ್ ರೆಡ್ಡಿ (Sudhir Reddy) ಸೋಮವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿ ರೂಪಾ ಅವರು ರೋಹಿಣಿಯವರನ್ನು ಪಶ್ನಿಸುವುದಕ್ಕೆ ಅಸಲಿಗೆ ಯಾರು? ತನ್ನ ಪತ್ನಿಯ ವಿಷಯದಲ್ಲಿ ಅವರು ಮೂಗು ತೂರಿಸುತ್ತಿರುವುದು ಯಾಕೆ ಅಂತ ರೆಡ್ಡಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 20, 2023 11:32 AM
Latest Videos